Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಯಾರು ನೋಡುದ್ರೆ ಶಾಕ್ ಆಗ್ತೀರಾ?!

ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಯಾರು ನೋಡುದ್ರೆ ಶಾಕ್ ಆಗ್ತೀರಾ?!
ಬೆಂಗಳೂರು , ಸೋಮವಾರ, 9 ಆಗಸ್ಟ್ 2021 (07:18 IST)
Bigg Boss Kannada 8:120 ದಿನಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆದಿದ್ದು, ಅಂತಿಮವಾಗಿ ಹಳ್ಳಿ ಹುಡುಗ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಕೈಯಲ್ಲಿ ಹಿಡಿದಿದ್ದಾರೆ. ಕೊನೆಯವರೆಗೂ ಟಫ್ ಫೈಟ್ ಕೊಟ್ಟ ಬೈಕರ್ ಅರವಿಂದ್ ಕೆ. ಪಿ ಅವರು ರನ್ನರ್ ಅಪ್ ಆಗಿದ್ದಾರೆ.

57 ಕ್ಯಾಮೆರಾಗಳು,  20 ಸ್ಪರ್ಧಿಗಳು ಸ್ಪರ್ಧಿಗಳು, ಐದು ದ್ವಾರಗಳು... 120 ದಿನಗಳ ಭರ್ಜರಿ ಪ್ರಯಾಣ ಈಗ ಕೊನೆಯಾಗಿದೆ. 17 ವಾರಗಳ ಕಾಲ ನಡೆದ  72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ಸ್ ಜರ್ನಿಗೆ ಇಂದು ಅದ್ದೂರಿಗೆ ತೆರೆ ಎಳೆಯಲಾಗಿದೆ. ರಿಯಾಲಿಟಿ ಶೋಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada Season 8) ಕಾರ್ಯಕ್ರಮ ಮತ್ತೆ ಆರಂಭವಾಯಿತು. ಕೊರೋನಾ ಎರಡನೇ ಅಲೆಯಿಂದಾಗಿ ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆಯುತ್ತೋ ಅಥವಾ ಇಲ್ಲವೋ ಅನ್ನೋ ಪ್ರಶ್ನೆ ಕಾಡುತ್ತಿದ್ದರೂ  ಎಲ್ಲರ ಪರಿಶ್ರಮದಿಂದ ಇಂದು ಈ ಜರ್ನಿ ಕೊನೆಯಗೂ ಗುರಿ ಮುಟ್ಟಿದೆ. ಮೊದಲಿಗೆ ಟಾಪ್ 3ಯಲ್ಲಿದ್ದ ದಿವ್ಯಾ ಉರುಡುಗ ಅವರು ಈ ಸೀಸನ್ನ ಕೊನೆಯ ಎಲಿಮಿನೇಷನ್ನಲ್ಲಿ ಎವಿಕ್ಟ್ ಆಗಿ ಮನೆಯಿಂದ ಹೊರ ಬಂದರು. ಇಂದು ನಡೆದ ಫಿನಾಲೆಯಲ್ಲಿ 11 ಲಕ್ಷದ 61 ಸಾವಿರದ 205 ಮತಗಳನ್ನು ಪಡೆದು 3ನೇ ಸ್ಥಾನ ಪಡೆದು ದಿವ್ಯಾ ಉರುಡುಗ ಆಟದಿಂದ ಹೊರ ಬಂದರು.

ಎಂದಿನಂತೆ ನಿರೂಪಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಇಬ್ಬರು ಫೈನಲಿಸ್ಟ್ಗಳಾದ ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ ಅವರನ್ನು ವೇದಿಕೆಗೆ ಕರೆ ತಂದರು. ಕಿಚ್ಚನ ಜೊತೆ ಇಬ್ಬರೂ ಫೈನಲಿಸ್ಟ್ಗಳು ವೇದಿಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದವರಲ್ಲಿ ಕಾತರ ಹೆಚ್ಚಾಯಿತು. ವಿನ್ನರ್ ಯಾರೆಂದು ಹೇಳುವ ಮೊದಲು ಸುದೀಪ್ ಅವರು ಇತರೆ ಸ್ಪರ್ಧಿಗಳನ್ನು ಯಾರು ಜಯಗಳಿಸಬೇಕೆಂಬುದು ನಿಮ್ಮ ಇಷ್ಟ ಎನ್ನುತ್ತಾರೆ. ಆಗ ಶಮಂತ್ ಹಾಗೂ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಮಂಜು ಅವರೇ ಗೆಲ್ಲಬೇಕು ಎಂದು. ಅದರಲ್ಲೂ ಮಂಜು ಅವರಿಗೆ ಹೆಜ್ಜೆ ಹೆಜ್ಜೆಗೂ ನಿಂದಿಸಿ, ಚುಚ್ಚು ಮಾತುಗಳನ್ನಾಡಿದ ಚಕ್ರವರ್ತಿ ಹಾಗೂ ಪ್ರಶಾಂತ್ ಅವರೂ ಮಂಜು ಗೆಲ್ಲಬೇಕು ಎಂದರು.
120 ದಿನಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆದಿದ್ದು, ಅಂತಿಮವಾಗಿ ಹಳ್ಳಿ ಹುಡುಗ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಕೈಯಲ್ಲಿ ಹಿಡಿದಿದ್ದಾರೆ. ಕೊನೆಯವರೆಗೂ ಟಫ್ ಫೈಟ್ ಕೊಟ್ಟ ಬೈಕರ್ ಅರವಿಂದ್ ಕೆ. ಪಿ ಅವರು ರನ್ನರ್ ಅಪ್ ಆಗಿದ್ದಾರೆ. ವಿಜೇತರ ಹೆಸರನ್ನು ಪ್ರಕಟಿಸುವ ಮೊದಲು ಯಾರು ಯಾವ ಕಡೆ ನಿಲ್ಲಬೇಕು ಎಂದು ಟಾಸ್ ಮಾಡುವ ಮೂಲಕ ಫೈನಲಿಸ್ಟ್ಗಳಿಗೆ ಆಯ್ಕೆ ಮಾಡುವ ಅವಕಾಶ ನೀಡಲಾಗಿದ್ದು ವಿಶೇಷ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯ ಮೂವರು ಫೈನಲಿಸ್ಟ್ ಯಾರು ಗೊತ್ತಾ?