Select Your Language

Notifications

webdunia
webdunia
webdunia
webdunia

ವೀಕ್ಷಕರ ಪ್ರಕಾರ ಬಿಗ್ ಬಾಸ್ 8 ವಿನ್ನರ್ ಇವರೇ

ವೀಕ್ಷಕರ ಪ್ರಕಾರ ಬಿಗ್ ಬಾಸ್ 8 ವಿನ್ನರ್ ಇವರೇ
ಬೆಂಗಳೂರು , ಮಂಗಳವಾರ, 11 ಮೇ 2021 (09:06 IST)
ಬೆಂಗಳೂರು: ಕೊರೋನಾದಿಂದಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧಕ್ಕೇ ನಿಂತಿರಬಹುದು. ಆದರೆ 70 ದಿನಗಳ ಕಾಲದ ಆಟದಲ್ಲಿ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿ ಯಾರು ಎಂದು ತೀರ್ಮಾನ ಮಾಡಿದ್ದಾರೆ.


ಬಿಗ್ ಬಾಸ್ ರದ್ದುಗೊಂಡ ಸುದ್ದಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅರ್ಧಕ್ಕೇ ನಿಂತರೂ ಈ ಬಾರಿ ತಮ್ಮ ಪ್ರಕಾರ ಇವರೇ ವಿನ್ನರ್ ಎಂದು ಕೆಲವು ಸ್ಪರ್ಧಿಗಳ ಹೆಸರು ಬಹಿರಂಗಪಡಿಸಿದ್ದಾರೆ.

ವೀಕ್ಷಕರು ಹೆಚ್ಚು ವೋಟ್ ಮಾಡಿರುವುದು ಅರವಿಂದ್, ಮಂಜು ಪಾವಗಡ ಮತ್ತು ವೈಷ್ಣವಿಗೆ. ಈ ಮೂವರಲ್ಲಿ ಒಬ್ಬರು ಬಿಗ್ ಬಾಶ್ ವಿನ್ ಆಗಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಅದರಂತೆ ವಿವಿಧ ಮೆಮೆಗಳ ಮೂಲಕ ಅರವಿಂದ್ ಗೆಲ್ಲಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ಈ ಬಾರಿಯ ವೈಷ್ಣವಿಯೇ ವಿನ್ ಆಗುತ್ತಿದ್ದರು ಎಂದಿದ್ದಾರೆ. ಆದರೆ ಶುಭಾ, ಪ್ರಶಾಂತ್, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಬಗ್ಗೆ ಜನ ಅಷ್ಟೊಂದು ಒಲವು ತೋರಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ ಕೇರ್ ಸೆಂಟರ್ ಗೆ 2 ಕೋಟಿ ರೂ. ದೇಣಿಗೆ ಕೊಟ್ಟ ಅಮಿತಾಭ್ ಬಚ್ಚನ್