Publish Date: Sun, 09 May 2021 (09:15 IST)
Updated Date: Sun, 09 May 2021 (09:18 IST)
ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋವನ್ನು ಅರ್ಧಕ್ಕೇ ರದ್ದು ಮಾಡಲಾಗಿದೆ. ಈ ಕಾರಣಕ್ಕೆ ಇಂದು ಸ್ಪರ್ಧಿಗಳನ್ನು ಹೊರ ಕರೆತರಲಾಗುತ್ತದೆ.
ಟೆಲಿವಿಷನ್ ಅಸೋಸಿಯೇಷನ್ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ‍್ವರ್ ಗುಂಡ್ಕಲ್ ಭಾರವಾದ ಮನಸ್ಸಿನಿಂದ, ಅನಿವಾರ್ಯವಾಗಿ ಶೋ ಅರ್ಧಕ್ಕೇ ನಿಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಅಲ್ಲದೆ, ಇಂದು ಸ್ಪರ್ಧಿಗಳನ್ನು ಹೊರ ಕರೆಯಲಾಗುತ್ತದೆ. ನಂತರ ಸ್ಪರ್ಧಿಗಳನ್ನು ಮತ್ತು ಬಿಗ್ ಬಾಸ್ ತಂಡವನ್ನು ಪ್ರತ್ಯೇಕ ತಂಡಗಳಾಗಿ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ದಿದ್ದ ಒಂದೇ ಒಂದು ಮನರಂಜನೆ ಬಿಗ್ ಬಾಸ್ ಆಗಿತ್ತು. ಈಗ ಅದೂ ರದ್ದಾಗಿದೆ.