Select Your Language

Notifications

webdunia
webdunia
webdunia
Tuesday, 8 April 2025
webdunia

ಗುಟ್ಟಾಗಿ ಧಾರವಾಹಿಗಳ ಚಿತ್ರೀಕರಣ ನಡೆಸಿದರೆ ಹುಷಾರ್!

ಧಾರವಾಹಿ
ಬೆಂಗಳೂರು , ಭಾನುವಾರ, 9 ಮೇ 2021 (09:07 IST)
ಬೆಂಗಳೂರು: ಏಪ್ರಿಲ್ 27 ರಿಂದ ಜನತಾ ಕರ್ಫ್ಯೂ ಹೇರಿದ್ದರೂ ಕೆಲವು ಧಾರವಾಹಿ ತಂಡಗಳು ಗುಟ್ಟಾಗಿ ರೆಸಾರ್ಟ್ ಹೋಟೆಲ್ ಗಳಲ್ಲಿ ಚಿತ್ರೀಕರಣ ನಡೆಸುತ್ತಿವೆ ಎಂಬ ಆರೋಪಗಳು ಕೇಳಿಬಂದಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ.


ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮಾಧ‍್ಯಮ ಪ್ರಕಟಣೆ ನೀಡಿದ್ದು, ಸರ್ಕಾರದ ಲಾಕ್ ಡೌನ್ ನಿರ್ಧಾರಕ್ಕೆ ಕೈ ಜೋಡಿಸುವುದಾಗಿ ಹೇಳಿದೆ. ಹೀಗಾಗಿ ಮೇ 10 ರಿಂದ 24 ರವರೆಗೆ ಚಿತ್ರೀಕರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಸೂಚನೆ ನೀಡಿದೆ.

ಒಂದು ವೇಳೆ ನಿಯಮ ಉಲ್ಲಂಘಿಸಿ ಗುಟ್ಟಾಗಿ ಚಿತ್ರೀಕರಣ ನಡೆಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಮೇ 24 ರ ನಂತರ ಸರ್ಕಾರದ ನಿರ್ಧಾರ ನೋಡಿಕೊಂಡು ಧಾರವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಕ್ಸಿನ್ ಪಡೆದರೂ ಕೊರೋನಾಗೊಳಗಾದ ನಟಿ ತಾರಾ ಹೇಳಿದ್ದೇನು?