ಬೆಂಗಳೂರು: ಲಾಕ್ ಡೌನ್ ವೇಳೆ ಶೂಟಿಂಗ್ ಇಲ್ಲದೇ ಎಲ್ಲಾ ನಟರೂ ತಮ್ಮ ಫಾರಂ ಹೌಸ್ ಕಡೆಗೆ ಮುಖ ಮಾಡಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಫಾರಂ ಹೌಸ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.
ತಮ್ಮ ಫಾರಂ ಹೌಸ್ ನಲ್ಲಿ ಸಂಗಡಿಗರೊಂದಿಗೆ ಸೇರಿಕೊಂಡು ಗಿಡ ನೆಡುವ ಕೆಲಸದಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಯಲ್ ಸ್ಟಾರ್ ಉಪೇಂದ್ರ, ನಟ ದರ್ಶನ್, ಚಿಕ್ಕಣ್ಣ ಮತ್ತಿತರರೂ ತಮ್ಮ ಫಾರಂ ಹೌಸ್ ನಲ್ಲಿ ಅಪ್ಪಟ ಕೃಷಿಕರಾಗಿ ಕಾಲ ಕಳೆಯುತ್ತಿದ್ದಾರೆ. ಶೂಟಿಂಗ್ ಇಲ್ಲದ ವೇಳೆ ಯಾವ ಸ್ಟಾರ್ ಗಿರಿಯೂ ಇಲ್ಲದೇ ಸಿಕ್ಕ ಬಿಡುವಿನ ವೇಳೆಯನ್ನು ಈ ಸ್ಟಾರ್ ನಟರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.