Select Your Language

Notifications

webdunia
webdunia
webdunia
webdunia

ಕೊರೋನಾಗೆ ಬಲಿಯಾದ ಸ್ಯಾಂಡಲ್ ವುಡ್ ಹಿರಿಯ ನಟ ಅರವಿಂದ್

ಕೊರೋನಾಗೆ ಬಲಿಯಾದ ಸ್ಯಾಂಡಲ್ ವುಡ್ ಹಿರಿಯ ನಟ ಅರವಿಂದ್
ಬೆಂಗಳೂರು , ಶನಿವಾರ, 8 ಮೇ 2021 (07:41 IST)
ಬೆಂಗಳೂರು: ಮಹಾಮಾರಿ ಕೊರೋನಾ ಮತ್ತೊಬ್ಬ ಸ್ಯಾಂಡಲ್ ವುಡ್ ಕಲಾವಿದನ ಜೀವ ಬಲಿ ಪಡೆದಿದೆ. ಹಿರಿಯ ನಟ ‘ಶಂಖನಾದ’ ಅರವಿಂದ್ ಕೊರೋನಾಗೆ ಬಲಿಯಾಗಿದ್ದಾರೆ.


ಎರಡು ದಿನಗಳ ಹಿಂದಷ್ಟೇ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಬೆಟ್ಟದ ಹೂವು, ಅಂತರ್ಗಾಮಿ, ಅಪರಿಚಿತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶಂಖನಾದ ಅರವಿಂದ್ ಧಾರವಾಹಿಗಳಿಗೂ ಬಣ್ಣ ಹಚ್ಚಿದ್ದರು. ಶಂಖನಾದ ಸಿನಿಮಾ ಬಳಿಕ ಆ ಹೆಸರು ಅವರ ಹೆಸರಿನೊಂದಿಗೆ ಸೇರ್ಪಡೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಪಕ್ಷಗಳಿಗೆ ಮಗನ ವಿಡಿಯೋ ಮೂಲಕ ಸಲಹೆ ನೀಡಿದ ನಿರ್ದೇಶಕ ಪನ್ನಗಾಭರಣ