Publish Date: Thu, 06 May 2021 (10:23 IST)
Updated Date: Thu, 06 May 2021 (10:24 IST)
ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಯಾರೋ ಕಿಡಿಗೇಡಿಗಳು ದೊಡ್ಡಣ್ಣನವರ ಫೋಟೋ ಹಾಕಿ ಆರ್ ಐಪಿ ಎಂದು ಬರೆದು ಅವರು ತೀರಿಕೊಂಡಿದ್ದಾರೆಂದು ಸುಳ್ಳು ಸುದ್ದಿ ಹರಿಯಬಿಟ್ಟಿದ್ದರು. ಇದು ದೊಡ್ಡಣ್ಣನವರ ಗಮನಕ್ಕೂ ಬಂದಿದೆ.
ಈ ಸುಳ್ಳು ಸುದ್ದಿ ಹಿನ್ನಲೆಯಲ್ಲಿ ಹಲವರು ಕರೆ ಮಾಡಿ ವಿಚಾರಿಸಿದ್ದಾರೆ. ಅದಕ್ಕೇ ವಿಡಿಯೋ ಸ್ಪಷ್ಟನೆ ನೀಡಿರುವ ದೊಡ್ಡಣ್ಣ ನಾನು ಸತ್ತಿಲ್ಲ. ಯಾರೋ ಸುಳ್ಳು ಸುದ್ದಿ ಹರಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರುವವರೆಗೂ ನಾನು ಅರೋಗ್ಯವಾಗಿಯೇ ಇರುತ್ತೇನೆ ಎಂದಿದ್ದಾರೆ.