Select Your Language

Notifications

webdunia
webdunia
webdunia
webdunia

ಮುಂದಿನ ಎರಡು ವಾರ ಲಾಕ್ ಡೌನ್ ಅಲ್ಲದ ನಿರ್ಬಂಧ

webdunia
ಬೆಂಗಳೂರು , ಶನಿವಾರ, 8 ಮೇ 2021 (08:23 IST)
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ವಾರಗಳ ಕಾಲ ನಿರ್ಬಂಧ ಹೇರಲಾಗಿದೆ. ಇದನ್ನು ಪೂರ್ಣ ಲಾಕ್ ಡೌನ್ ಎಂದೂ ಕರೆಯುವಂತಿಲ್ಲ. ಆ ರೀತಿ ನಿಯಮ ಜಾರಿಗೆ ತರಲಾಗಿದೆ.


ಕಳೆದ ಎರಡು ವಾರಗಳಿಂದ ಇದ್ದ ನಿರ್ಬಂಧದ ನಿಯಮಗಳಿಗೇ ಕೊಂಚ ಬದಲಾವಣೆ ತಂದು ಹೊಸ ನಿಯಮ ಜಾರಿಗೆ ತರಲಾಗಿದೆ. ಅದರಂತೆ ರಾಜ್ಯದಲ್ಲಿ ಮೇ 10 ರಿಂದ 24 ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.

ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದೆಲ್ಲವುಗಳೂ ಬಂದ್ ಆಗಲಿವೆ. ಈ ಮೊದಲಿದ್ದಂತೇ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ.

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಪಡೆಯಬೇಕಾದರೆ ವಾಹನ ಬಳಸಿ ಹೋಗಬಾರದು. ಕೈಗಾರಿಕೆಗಳಿಗೆ ಈ ಮೊದಲು ಅವಕಾಶವಿತ್ತು. ಆದರೆ ಈಗ ಅಗತ್ಯ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಮತ್ತು ಸ್ಥಳೀಯ ಕಾರ್ಮಿಕರನ್ನು ಒಳಗೊಂಡ ಕೈಗಾರಿಕೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಉಳಿದಂತೆ  ಈ ಮೊದಲಿನ ಕಟ್ಟಪಾಡುಗಳೇ ಜಾರಿಯಲ್ಲಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದಾಗಿ ಕೋವಿಡ್ ವಿರುದ್ಧ ಹೋರಾಡೋಣ- ಪ್ರಧಾನಿಗ ರಾಹುಲ್ ಗಾಂಧಿ ಪತ್ರ