Select Your Language

Notifications

webdunia
webdunia
webdunia
webdunia

ಕೊರೋನಾ ವಿರುದ್ಧ ಹೋರಾಡಲು ಹೊಸ ಯೋಜನೆ ಪ್ರಕಟಿಸಿದ ವಿರಾಟ್ ಕೊಹ್ಲಿ ದಂಪತಿ

ವಿರಾಟ್ ಕೊಹ್ಲಿ
ಮುಂಬೈ , ಶುಕ್ರವಾರ, 7 ಮೇ 2021 (10:47 IST)
ಮುಂಬೈ: ಐಪಿಎಲ್ ರದ್ದಾದ ಬೆನ್ನಲ್ಲೇ ತವರಿಗೆ ಮರಳಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.


ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಕೊರೋನಾ ವಿರುದ್ಧ ಅಭಿಯಾನವೊಂದನ್ನು ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಟೋ ಸಂಸ್ಥೆಯ ಜೊತೆಗೂಡಿ InThisTogether ಎಂಬ ಅಭಿಯಾನವನ್ನು ಆರಂಭಿಸಿರುವ ಕೊಹ್ಲಿ ದಂಪತಿ ಈ ಮೂಲಕ ಫಂಡ್ ಸಂಗ್ರಹಿಸಿ ಕೊರೋನಾದಿಂದ ಸಂತ್ರಸ್ತರಾದವರಿಗೆ ನೆರವಾಗಲು ತೀರ್ಮಾನಿಸಿದ್ದಾರೆ.

ನಮ್ಮ ಹೋರಾಟದಲ್ಲಿ ನೀವೂ ಕೈಜೋಡಿಸಿ ಎಂದು ಕೊಹ್ಲಿ ದಂಪತಿ ಮನವಿ ಮಾಡಿದ್ದಾರೆ. ಆಕ್ಸಿಜನ್ ಪೂರೈಕೆ, ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿ, ಸಂಕಷ್ಟ ಪೀಡಿತರಿಗೆ ಸಹಾಯ ಮಾಡುವ ಗುರಿಯನ್ನು ಅವರು ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ರದ್ದಾದ ಮೇಲೂ ಧೋನಿ ಹೃದಯವಂತಿಕೆಗೆ ಸಿಎಸ್ ಕೆ ಫ್ಯಾನ್ಸ್ ಫಿದಾ