Publish Date: Sat, 08 May 2021 (07:43 IST)
Updated Date: Sat, 08 May 2021 (07:45 IST)
ಬೆಂಗಳೂರು: ಕೊರೋನಾದಿಂದಾಗಿ ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯದೇ ವೀಕೆಂಡ್ ಮನರಂಜನೆ ಒದಗಿಸುವುದು ಕಿರುತೆರೆ ವಾಹಿನಿಗಳಿಗೆ ದೊಡ್ಡ ಸವಾಲಾಗಿದೆ.
ಇದೀಗ ಜೀ ಕನ್ನಡ ವಾಹಿನಿ, ಉದಯ ವಾಹಿನಿ ವೀಕೆಂಡ್ ನಲ್ಲೂ ಧಾರವಾಹಿಗಳ ಮೂಲಕ ಪ್ರೇಕ್ಷಕರ ಸೆಳೆಯಲು ಮುಂದಾಗಿದೆ. ಇದುವರೆಗೆ ಕೇವಲ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ಧಾರವಾಹಿಗಳು ಇನ್ನು ಶನಿವಾರವೂ ಪ್ರಸಾರವಾಗಲಿದೆ.
ಜೀ ಕನ್ನಡ ಮತ್ತು ಉದಯ ವಾಹಿನಿ ಶನಿವಾರವೂ ತನ್ನ ಜನಪ್ರಿಯ ಧಾರವಾಹಿಗಳನ್ನು ಪ್ರಸಾರ ಮಾಡಲು ಮುಂದಾಗಿದೆ. ಆದರೆ ಕಲರ್ಸ್ ಕನ್ನಡಕ್ಕೆ ಬಿಗ್ ಬಾಸ್ ಶೋ ಇರುವುದರಿಂದ ವೀಕೆಂಡ್ ನಲ್ಲಿ ಸಮಯ ಹೊಂದಿಸುವುದು ಕಷ್ಟವಾಗದು. ಮುಂದೆ ಚಿತ್ರೀಕರಣಕ್ಕೆ ಅನುಮತಿ ಸಿಗುವವರೆಗೂ ಟೈಮ್ ಸ್ಲಾಟ್ ಹೊಂದಿಸುವುದು ಕಿರುತೆರೆ ವಾಹಿನಿಗಳಿಗೆ ಸವಾಲಾಗಲಿದೆ.