Publish Date: Fri, 07 May 2021 (10:17 IST)
Updated Date: Fri, 07 May 2021 (10:19 IST)
ಬೆಂಗಳೂರು: ಬಿಗ್ ಬಾಸ್ ನಿಂದ ಇದ್ದಕ್ಕಿದ್ದಂತೆ ಮಾಯವಾದ ಸ್ಪರ್ಧಿ ದಿವ್ಯಾ ಉರುಡುಗ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಇದೀಗ ಮಾಹಿತಿಯೊಂದು ಬಂದಿದೆ.
ಮೂಲಗಳ ಪ್ರಕಾರ ದಿವ್ಯಾ ಸ್ಪರ್ಧೆಯಿಂದ ಎಲಿಮಿನೇಟ್ ಆಗಿಲ್ಲ. ಅವರಿಗೆ ಮೂತ್ರನಾಳದ ಸೋಂಕು ಸಮಸ್ಯೆಯಾಗಿದ್ದು, ಇದಕ್ಕೆ ಚಿಕಿತ್ಸೆಗಾಗಿ ಹೊರಗೆ ಬಂದಿದ್ದಾರೆ. ಆದರೆ ಈಗ ಹೊರಗೆ ಬಂದಿರುವ ಕಾರಣ ಅವರು ಮತ್ತೆ ಕ್ವಾರಂಟೈನ್ ಗೊಳಗಾಗಿಯೇ ಮನೆ ಪ್ರವೇಶಿಸಬೇಕಾಗಿದೆ.
ಹೀಗಾಗಿ ಸದ್ಯಕ್ಕೆ ಅವರು ಸೀಕ್ರೆಟ್ ರೂಂನಲ್ಲಿದ್ದುಕೊಂಡೇ ಆಡಲಿದ್ದಾರೆ. ಆದರೆ ಅವರಿಲ್ಲದೇ ಅವರಿಗೆ ಹೆಚ್ಚು ಆಪ್ತವಾಗಿದ್ದ ಅರವಿಂದ್ ಸೇರಿದಂತೆ ಇತರ ಸ್ಪರ್ಧಿಗಳು ತೀರಾ ಬೇಸರಗೊಂಡಿದ್ದಾರೆ.