Publish Date: Wed, 05 May 2021 (09:56 IST)
Updated Date: Wed, 05 May 2021 (10:00 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ನಾಗಿಣಿ 2 ತಂಡದಿಂದ ನಟ ಮೋಹನ್ ಹೊರಬಂದಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಅವರು ಧಾರವಾಹಿಯಿಂದ ಹೊರಬಂದಿದ್ದಾರೆ.
ನಟ ಮೋಹನ್ ತಂದೆ-ತಾಯಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿತ್ತು. ಅಲ್ಲದೆ ಈ ನಡುವೆ ತಮ್ಮ ತಂದೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರಂತೆ. ಇದರಿಂದಾಗಿ ಇಬ್ಬರನ್ನೂ ನೋಡಿಕೊಳ್ಳುವ ಜವಾಬ್ಧಾರಿ ಮೋಹನ್ ಅವರದ್ದಾಗಿತ್ತು. ಅದಕ್ಕಾಗಿ ಅವರು ಧಾರವಾಹಿ ತಂಡಕ್ಕೆ ಸಮಸ್ಯೆಯಾಗುವುದು ಬೇಡವೆಂದು ಹೊರಬಂದರಂತೆ.
ಸದ್ಯಕ್ಕೆ ಅವರ ಮಗನಿಗೂ ಕೊರೋನಾ ಸೋಂಕು ತಗುಲಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ತಮ್ಮ ಕೌಟುಂಬಿಕ ಕಾರಣಗಳಿಂದಾಗಿ ಇಷ್ಟವಿಲ್ಲದಿದ್ದರೂ ಧಾರವಾಹಿ ಬಿಡುವ ಪರಿಸ್ಥಿತಿ ಮೋಹನ್ ಅವರದ್ದಾಗಿದೆ.