Publish Date: Fri, 30 Apr 2021 (09:40 IST)
Updated Date: Fri, 30 Apr 2021 (09:41 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಿರುತೆರೆಯ ಶೂಟಿಂಗ್ ಗೂ ಬ್ರೇಕ್ ಬಿದ್ದಿದೆ. ಆದರೆ ಮುಂದಿನ 10 ದಿನಗಳ ಕಾಲ ಹೊಸ ಎಪಿಸೋಡ್ ಗಳನ್ನು ಪ್ರೇಕ್ಷಕರಿಗೆ ನೀಡುವ ಸವಾಲು ಕಿರುತೆರೆಯದ್ದಾಗಿದೆ.
ಈಗಾಗಲೇ ಜೊತೆ ಜೊತೆಯಲಿ ಧಾರವಾಹಿಯ ಪ್ರಾರಂಭದಲ್ಲಿ ಟೈಟಲ್ ಹಾಡನ್ನು ಪೂರ್ತಿಯಾಗಿ ಪ್ರಸಾರ ಮಾಡಿ ಧಾರವಾಹಿ ಎಪಿಸೋಡ್ ನ ಪ್ರಸಾರ ಸಮಯ ಕಡಿತ ಮಾಡಲಾಗುತ್ತಿದೆ. ಮುಂದಿನ ವಾರ ಇನ್ನಷ್ಟು ಧಾರವಾಹಿಗಳು ಈ ತಂತ್ರಕ್ಕೆ ಮೊರೆ ಹೋಗಬಹುದು.
ಪರಿಸ್ಥಿತಿ ಸುಧಾರಿಸದಿದ್ದರೆ ಮತ್ತೆ ಲಾಕ್ ಡೌನ್ ಮುಂದುವರಿಯಬಹುದು. ಹೀಗಾಗಿ ಧಾರವಾಹಿಗಳು ಎಪಿಸೋಡ್ ಗಳನ್ನು ಹೊಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಬ್ಯಾಂಕಿಂಗ್ ಎಪಿಸೋಡ್ ಇಲ್ಲದ ಧಾರವಾಹಿಗಳು ಹಳೆಯ ಎಪಿಸೋಡ್ ಗಳನ್ನೇ ಮರುಪ್ರಸಾರ ಮಾಡಲಿವೆ.