ಬೆಂಗಳೂರು: ಥಿಯೇಟರ್ ವಿಚಾರದಲ್ಲಿ ಸರ್ಕಾರದ ವಿರುದ್ದ ಟೊಂಕಕಟ್ಟಿದ್ದ ನಿರ್ಮಾಪಕ ಕೆ ಮಂಜು ಮತ್ತೆ ಲಾಕ್ ಡೌನ್ ಘೋಷಿಸಿರುವುದಕ್ಕೆ ಸಿಡಿದೆದ್ದಿದ್ದಾರೆ.
ಲಾಕ್ ಡೌನ್ ಮಾಡಿದರೆ ನಿರ್ಮಾಪಕರ ಗೋಳು ಕೇಳೋರು ಯಾರು? ನಮಗೆ ಬೇರೆ ವ್ಯವಸ್ಥೆ ಮಾಡಿಕೊಡಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಬಾರಿ ಲಾಕ್ ಡೌನ್ ಮಾಡಿದಾಗ 300-400 ಕೋಟಿ ನಷ್ಟವಾಗಿದೆ. ಚಿತ್ರಮಂದಿರದ ಟ್ಯಾಕ್ಸ್, ಕರೆಂಟ್ ಬಿಲ್, ವಾಟರ್ ಬಿಲ್ ಎಲ್ಲಾ ಮನ್ನಾ ಮಾಡಲಿ. ಇದುವರೆಗೆ ಸರ್ಕಾರ ಚಿತ್ರರಂಗದ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಈಗ ಮತ್ತೆ ಏಕ್ ದಮ್ ಲಾಕ್ ಡೌನ್ ಮಾಡಿದ್ದಾರೆ. ಹೀಗೆ ಆದರೆ ನಾವು ನಿರ್ಮಾಪಕರು ಏನು ಮಾಡಬೇಕು? ನಾವು ಸಿನಿಮಾ ಮಾಡೋದು ಹೇಗೆ? ಹಣವಿಲ್ಲ, ಚಿತ್ರ ಮಂದಿರಗಳಿಲ್ಲ ಎಂದರೆ ಶೂಟಿಂಗ್ ಮಾಡೋದು ಹೇಗೆ? ತಲೆಕೆಟ್ಟು ಹೋಗಿದೆ ಎಂದು ನಿರ್ಮಾಪಕ ಕೆ ಮಂಜು ಆಕ್ರೋಶ ಹೊರಹಾಕಿದ್ದಾರೆ.