Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ‘ಕೋಟಿ’ ಬಂಡವಾಳ ಹೂಡಿದ್ದ ಮೊದಲ ನಿರ್ಮಾಪಕ ರಾಮು

webdunia
ಬೆಂಗಳೂರು , ಮಂಗಳವಾರ, 27 ಏಪ್ರಿಲ್ 2021 (09:34 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕೇವಲ ಲಕ್ಷಗಳ ಲೆಕ್ಕದಲ್ಲಿ ಬಜೆಟ್ ಹಾಕಿ ಸಿನಿಮಾ ಮಾಡುತ್ತಿದ್ದ ಕಾಲದಲ್ಲಿ ಮೊದಲ ಬಾರಿಗೆ ಕೋಟಿ ಖರ್ಚು ಮಾಡಿ ಉತ್ತಮ ಸಿನಿಮಾ ಕೊಟ್ಟ ಖ್ಯಾತಿ ನಿರ್ಮಾಪಕ ರಾಮು ಅವರದ್ದು.


ದೇವರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ‘ಲಾಕಪ್ ಡೆತ್’ ಸಿನಿಮಾ ಮೂಲಕ ಕೋಟಿ ಬಜೆಟ್ ನ ಸಿನಿಮಾ ಮಾಡಿದ್ದರು. ಇದಾದ ಬಳಿಕ ಅವರು ನಿರ್ಮಾಣ ಮಾಡಿದ್ದ ಹೆಚ್ಚಿನ ಸಿನಿಮಾಗಳೂ ಬಿಗ್ ಬಜೆಟ್ ಸಿನಿಮಾಗಳೇ. ದರ್ಶನ್ ಅಬಿನಯದಲ್ಲಿ ಕಲಾಸಿಪಾಳ್ಯ ಸಿನಿಮಾ ಕೂಡಾ ಅದ್ಧೂರಿ ವೆಚ್ಚದ್ದಾಗಿತ್ತು.

ವಿಪರ್ಯಾಸವೆಂದರೆ ಅವರು ಕೊನೆಯದಾಗಿ ನಿರ್ಮಾನ ಮಾಡಿದ್ದ ‘ಅರ್ಜುನ್ ಗೌಡ’ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದ ಸಿನಿಮಾವಾಗಿದೆ. ಈ ಸಿನಿಮಾ ಇನ್ನೂ ತೆರೆ ಕಂಡಿಲ್ಲ. ಹೆಚ್ಚು ವಿವಾದಿತ ಮಾತುಗಳಿಲ್ಲದೇ, ಸೈಲಂಟಾಗಿ ತನ್ನ ಕೆಲಸದಿಂದಲೇ ಸುದ್ದಿಯಾಗುತ್ತಿದ್ದ ರಾಮು ನಿಧನಕ್ಕೆ ನಟರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ದರ್ಶನ್, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ರಕ್ಷಿತಾ ಪ್ರೇಮ್, ಡಾರ್ಲಿಂಗ್ ಕೃಷ್ಣ, ಅನುಪ್ರಭಾಕರ್, ಸೃಜನ್ ಲೋಕೇಶ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ರಾತ್ರಿ ಜೀವನ ಸಂಪೂರ್ಣ ಆಫ್ ಆಗಿದೆ ಎಂದ ಖಿಲಾಡಿ ಚಿತ್ರದ ನಟಿ