ಬೆಂಗಳೂರು: ನಟಿ ರಮ್ಯಾ ಹಲವು ದಿನಗಳ ಬಳಿಕ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಹೆಚ್ಚಿನವರು ಅವರ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡುವ ಬಗ್ಗೆ, ಅವರು ಪ್ರಸಕ್ತ ಎಲ್ಲಿ ನೆಲೆಸಿದ್ದಾರೆಂಬ ಪ್ರಶ್ನೆ ಜೊತೆಗೆ ರಾಜಕೀಯಕ್ಕೆ ಬರಲ್ವಾ ಎಂಬ ಪ್ರಶ್ನೆಯನ್ನೂ ಜನರು ಕೇಳಿದ್ದಾರೆ. ಆದರೆ ಇದರ ಜೊತೆಗೆ ಅತೀ ಹೆಚ್ಚು ಕೇಳಿರುವುದು ಅವರ ಮದುವೆ ಬಗ್ಗೆ.
ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ನೋಡಿ ನೋಡಿ ಬೇಸತ್ತ ರಮ್ಯಾ ಅಬ್ಬಾ.. ಮದುವೆ.. ಮದುವೆ.. ಎಲ್ಲಿ ಹೋದರೂ ಇದೇ ಪ್ರಶ್ನೆ. ಜೀವನದಲ್ಲಿ ಮದುವೆ ಇಲ್ಲದೇ ಖುಷಿಯಾಗಿರಕ್ಕಾಗಲ್ವಾ? ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಭಿಮಾನಿಯೊಬ್ಬರಂತೂ ನೀವು ರಕ್ಷಿತ್ ಶೆಟ್ಟಿಯನ್ನು ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ರಮ್ಯಾ ರಕ್ಷಿತ್ ಶೆಟ್ಟಿ ಇನ್ ಸ್ಟಾಗ್ರಾಂ ಪೇಜ್ ಟ್ಯಾಗ್ ಮಾಡಿ ಸ್ಮೈಲಿ ಕಳುಹಿಸಿದ್ದಾರೆ. ಮತ್ತೆ ಕೆಲವರು ನೇರವಾಗಿ ನಿಮಗೆ ಮದುವೆಯಾಗಿದೆಯಾ? ಎಂದು ಕೇಳಿದ್ದಾರೆ. ಇವರಿಗೆ ರಮ್ಯಾ ಖಂಡಿತಾ ಇಲ್ಲ. ಇಂತಹ ಪ್ರಶ್ನೆಯೆಲ್ಲಾ ಎಲ್ಲಿಂದ ಬರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.