Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಸಾಯಬೇಡಿ, ತಿನ್ನಲು ಅನ್ನ ಸಿಗದೇ ಸಾಯ್ತೀರಿ: ಜಗ್ಗೇಶ್ ಹಿಡಿಶಾಪ

ಹಣಕ್ಕಾಗಿ ಸಾಯಬೇಡಿ, ತಿನ್ನಲು ಅನ್ನ ಸಿಗದೇ ಸಾಯ್ತೀರಿ: ಜಗ್ಗೇಶ್ ಹಿಡಿಶಾಪ
ಬೆಂಗಳೂರು , ಭಾನುವಾರ, 25 ಏಪ್ರಿಲ್ 2021 (10:31 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಕೊರೋನಾ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.


ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್, ಟಿವಿ ವಾಹಿನಿಯಲ್ಲಿ ಹೆಣ ಸಾಗಿಸಲು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕೊವಿಡ್ ಸಂತ್ರಸ್ತರು ಟಿವಿಲಿ ಮಾತನಾಡಿದ್ದು ನೋಡಿ ಸಂಕಟವಾಯ್ತು. ಆಸ್ಪತ್ರೆ, ಆಂಬ್ಯುಲೆನ್ಸ್, ಸ್ಮಶಾನ ಸಿಬ್ಬಂದಿ ಹಣಕ್ಕಾಗಿ ಸಾಯಬೇಡಿ. ಮುಂದೊಂದು ದಿನ ಅನ್ನ ಸಿಗದೇ ಸಾಯ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯ ಮಾಡಿ’ ಎಂದಿದ್ದಾರೆ.

‘ಇಂಥಾ ಸಮಯದಲ್ಲೇ ಇಂಥಾ ಕ್ರೂರಿಗಳು ಆಕ್ಟಿವ್ ಆಗೋದು. ಇಂಥಾ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ. ದೇವರೊಬ್ಬ ಮೇಲೆ ಎಲ್ಲ ನೋಡುತ್ತಿರುವ, ಮರೆಯಬೇಡಿ’ ಎಂದು ಜಗ್ಗೇಶ್ ಹಿಡಿಶಾಪ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಭಕ್ತರ ಕೆಂಗಣ್ಣಿಗೆ ಗುರಿಯಾದ ‘ಗಟ್ಟಿಮೇಳ’ ನಟ ಪವನ್