Publish Date: Sun, 25 Apr 2021 (09:51 IST)
Updated Date: Sun, 25 Apr 2021 (09:53 IST)
ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಆದರೆ ಮಹಿಳೆಯರಿಗೆ ಈ ವ್ಯಾಕ್ಸಿನ್ ತೊಂದರೆ ಉಂಟು ಮಾಡುತ್ತದೆಯೇ?
ಋತುಚಕ್ರದ ಐದು ದಿನಗಳ ಮೊದಲು ಕೊರೋನಾ ವ್ಯಾಕ್ಸಿನ್ ಪಡೆದುಕೊಂಡರೆ ಸಮಸ್ಯೆಯಾಗುತ್ತದೆ. ಹೀಗಾಗಿ ವ್ಯಾಕ್ಸಿನ್ ಪಡೆದುಕೊಳ್ಳುವಾಗ ಎಚ್ಚರ ಎಂದು ಸುದ್ದಿ ಹಬ್ಬಿತ್ತು. ಇದಕ್ಕೆ ಕೇಂದ್ರ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಋತುಚಕ್ರಪೂರ್ವದ ದಿನಗಳಲ್ಲಿ ವ್ಯಾಕ್ಸಿನ್ ಪಡೆಯಬಾರದು ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು. ಋತುಚಕ್ರದ ಐದು ದಿನ ಮೊದಲು ಮತ್ತು ನಂತರ ಮಹಿಳೆಯರಿಗೆ ಯಾವುದೇ ಸಮಸ್ಯೆಯಾಗದು. ಸುಳ್ಳು ಸುದ್ದಿಗೆ ಮರುಳಾಗಬೇಡಿ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.