Publish Date: Mon, 26 Apr 2021 (09:49 IST)
Updated Date: Mon, 26 Apr 2021 (09:52 IST)
ಬೆಂಗಳೂರು: ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕ ಹಾಡಿನ ತೆಲುಗು ವರ್ಷನ್ ಕಣ್ಣೇ ಅದಿರಿಂದಿ ಹಾಡನ್ನು ಹಾಡಿದ್ದ ಗಾಯಕಿ ಮಂಗ್ಲಿ ಈಗ ಸ್ಯಾಂಡಲ್ ವುಡ್ ಗೆ ಪ್ರವೇಶಿಸಲಿದ್ದಾರೆ. ಅದೂ ನಟಿಯಾಗಿ!
ಗಾಯಕಿ ಮಂಗ್ಲಿಗೆ ಶಿವರಾಜ್ ಕುಮಾರ್ ಅಭಿನಯಿಸಲಿರುವ 124 ನೇ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ರಾಮ್ ಧುಲಿಪುಡಿ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಮಂಗ್ಲಿ ಕೂಡಾ ನಟಿಸಲಿದ್ದಾರೆ. ಆದರೆ ಅವರ ಪಾತ್ರವೇನು ಎಂಬುದನ್ನು ಚಿತ್ರತಂಡ ಗುಟ್ಟಾಗಿ ಇಟ್ಟುಕೊಂಡಿದೆ. ರಾಬರ್ಟ್ ಹಾಡಿಗೆ ಕನ್ನಡ ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದ ಮಂಗ್ಲಿ ಈಗ ಕನ್ನಡ ಸಿನಿಮಾದಲ್ಲಿ ಖುಷಿಯಿಂದಲೇ ನಟಿಸಲು ಒಪ್ಪಿಕೊಂಡಿದ್ದಾರೆ.