ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸದ್ಯದಲ್ಲೇ ಒಟಿಟಿ ಫಾರ್ಮ್ಯಾಟ್ ನಲ್ಲಿ ತೆರೆ ಕಾಣಲಿದೆ.
ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ರಾಬರ್ಟ್ 100 ಕೋಟಿ ಬಾಚಿಕೊಂಡಿತ್ತು. ಈ ಸಿನಿಮಾವೀಗ ಒಟಿಟಿ ಫ್ಲ್ಯಾಟ್ ಫಾರ್ಮ್ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.
ಇದೇ ಏಪ್ರಿಲ್ 25 ರಂದು ಚಿತ್ರ ಅಮೆಝೋನ್ ಪ್ರೈಮ್ ನಲ್ಲಿ ಲಭ್ಯವಾಗಲಿದೆ. ಥಿಯೇಟರ್ ನಲ್ಲಿ ಬಿಡುಗಡೆಯಾದ 45 ದಿನ ಕಳೆದ ಬಳಿಕ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಮೂಲಗಳ ಪ್ರಕಾರ ಭಾರೀ ಮೊತ್ತಕ್ಕೆ ಈ ಸಿನಿಮಾ ಅಮೆಝೋನ್ ಪ್ರೈಮ್ ಗೆ ಮಾರಾಟವಾಗಿತ್ತು ಎನ್ನಲಾಗಿದೆ.