Publish Date: Mon, 26 Apr 2021 (10:19 IST)
Updated Date: Mon, 26 Apr 2021 (10:21 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ವೀಕೆಂಡ್ ಲಾಕ್ ಡೌನ್ ಸಮಯವನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಪಕ್ಕಾ ರೈತನಂತೆ ಕೆಲಸ ಮಾಡಿದ್ದಾರೆ.
ಕಳೆದ ಬಾರಿ ಲಾಕ್ ಡೌನ್ ವೇಳೆ ಉಪೇಂದ್ರ ಫಾರ್ಮ್ ಹೌಸ್ ನಲ್ಲಿ ತಮ್ಮ ಸಂಗಡಿಗರೊಂದಿಗೆ ಸಾವಯವ ಕೃಷಿ ಪದ್ಧತಿ ಮೂಲಕ ತರಕಾರಿ ಬೆಳೆದು ಆ ಬೆಳೆಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈಗ ಮತ್ತೆ ಕೊರೋನಾ ಏರಿಕೆಯಾದ ಹಿನ್ನಲೆಯಲ್ಲಿ ಶೂಟಿಂಗ್ ಗೆ ತೊಂದರೆಯಾಗಿದ್ದು, ಈ ಬಿಡುವಿನ ವೇಳೆಯಲ್ಲಿ ಮತ್ತೆ ತಮ್ಮ ಫಾರ್ಮ್ ಹೌಸ್ ನಲ್ಲಿ ಗುದ್ದಲಿ ಹಿಡಿದುಕೊಂಡು ಗಿಡಗಳಿಗೆ ಪಾತಿ ಮಾಡುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿದ್ದಾರೆ.