ಬೆಂಗಳೂರು: ಕನ್ನಡದಲ್ಲಿ ರಾಧಾರಮಣ, ಗಾಂಧಾರಿ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ವೀಕ್ಷಕರ ಮೆಚ್ಚಿನ ನಾಯಕಿಯಾಗಿರುವ ಕಾವ್ಯಾ ಗೌಡ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಎಂಗೇಜ್ ಮೆಂಟ್ ಮಾಡಿಕೊಂಡಿರುವ ಕಾವ್ಯಾ ತಮ್ಮ ಹುಡುಗನ ಜೊತೆಗಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದುಬೈನಲ್ಲಿ ಈ ಜೋಡಿ ಫೋಟೋ ಶೂಟ್ ಮಾಡಿಸಿಕೊಂಡಿದೆ.
ಇತ್ತೀಚೆಗಷ್ಟೇ ಕಾವ್ಯಾ ಕಲರ್ಸ್ ಕನ್ನಡದ ಚ್ಯಾಟ್ ಕಾರ್ನರ್ ಶೋನಲ್ಲಿ ಭಾಗಿಯಾಗಿದ್ದಾಗ, ಸದ್ಯದಲ್ಲೇ ತಾವು ಮದುವೆಯಾಗುತ್ತಿರುವುದಾಗಿ ಹೇಳಿದ್ದರು. ಮನೆಯವರೇ ನನಗೆ ನಿಶ್ಚಯಿಸಿದ ಹುಡುಗ ಎಂದೂ ಹೇಳಿದ್ದರು. ಈಗ ಅಧಿಕೃತವಾಗಿ ತಮ್ಮ ಹುಡುಗನನ್ನು ಪರಿಚಯಿಸಿದ್ದಾರೆ.