ಬೆಂಗಳೂರು: ಕೊರೋನಾ ಎಲ್ಲೆಡೆ ಸದ್ದು ಮಾಡುತ್ತಿರುವಾಗ ಕಿರುತೆರೆ ಕಾರ್ಯಕ್ರಮಗಳು ಮಾತ್ರ ಎಂದಿನಂತೆ ಮುಂದುವರಿದಿದೆ.
ಈ ನಡುವೆ ಜೀ ಕನ್ನಡ ವಾಹಿನಿ ತನ್ನ ರಿಯಾಲಿಟಿ ಶೋ ಶೂಟಿಂಗ್ ನಲ್ಲಿ ಕೊರೋನಾ ತಡೆಗೆ ವಿಶಿಷ್ಟವಾಗಿ ಸುರಕ್ಷತಾ ಕ್ರಮ ಕೈಗೊಂಡಿದೆ. ಈ ವಿಚಾರವನ್ನು ನಟಿ ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪ್ರಕಟಿಸಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ತೀರ್ಪುಗಾರರಲ್ಲಿ ಒಬ್ಬರಾಗಿರುವ ರಕ್ಷಿತಾ ಸುರಕ್ಷತಾ ದೃಷ್ಟಿಯಿಂದ ಪ್ರತೀ ತೀರ್ಪುಗಾರರ ನಡುವೆಯೂ ಪಾರದರ್ಶಕ ಪರದೆ ಹಾಕಿಕೊಂಡು ಕೂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸುರಕ್ಷತೆಗಾಗಿ ನಾವು ಎಲ್ಲಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ನಡೆಸಲಾಗುತ್ತಿದೆ ಎಂದು ರಕ್ಷಿತಾ ತಿಳಿಸಿದ್ದಾರೆ.