ನವದೆಹಲಿ: ಕೊರೋನಾ ಸೋಂಕಿತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮನೆಯಲ್ಲಿ ಕೂತರೂ ನೆಮ್ಮದಿಯಿಲ್ಲವಾಗಿದೆಯಂತೆ.
ಟ್ವಿಟರ್ ಮೂಲಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ ಆದರೆ ಪದೇ ಪದೇ ದುಃಖದ ಸಮಾಚಾರ ಕೇಳಿಬರುತ್ತಿದೆ. ಇದರಿಂದ ಮನಸ್ಸಿಗೆ ಬೇಸರವಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ‘ಕೇವಲ ಮಾತಿನಲ್ಲಿ ಸಾಧನೆ ಹೇಳಿಕೊಂಡರೆ ಸಾಲದು. ಕೆಲಸ ಮಾಡಿ ತೋರಿಸಿ’ ಎಂದಿದ್ದಾರೆ. ಭಾಷಣಗಳಿಂದ ಯಾವುದೇ ಪ್ರಯೋಜನವಾಗದು ಎಂದು ಪ್ರಧಾನಿ ಮೋದಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.