Select Your Language

Notifications

webdunia
webdunia
webdunia
webdunia

ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ಸುಳ್ಳು ಸುದ್ದಿ: ಕ್ಷಮೆ ಯಾಚಿಸಿದ ಶಶಿ ತರೂರ್

ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ಸುಳ್ಳು ಸುದ್ದಿ: ಕ್ಷಮೆ ಯಾಚಿಸಿದ ಶಶಿ ತರೂರ್
ನವದೆಹಲಿ , ಶುಕ್ರವಾರ, 23 ಏಪ್ರಿಲ್ 2021 (09:20 IST)
ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಂಚಿಕೊಂಡು ಪ್ರಮಾದದ ಅರಿವಾಗುತ್ತಿದ್ದಂತೇ ಕಾಂಗ್ರೆಸ್ ಸಂಸದ ಶಶಿ ತರೂರ್ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.


ಟ್ವಿಟರ್ ನಲ್ಲಿ ಸುಮಿತ್ರಾ ಮಹಾಜನ್ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರೊಂದಿಗೆ ನಡೆಸಿದ ಅನೇಕ ಮಾತುಕತೆಗಳು ಈ ಕ್ಷಣದಲ್ಲಿ ನೆನಪಾಗುತ್ತಿದೆ. ಓಂ ಶಾಂತಿ ಎಂದು ತರೂರ್ ಬರೆದುಕೊಂಡಿದ್ದರು.

ಶಶಿ ತರೂರ್ ಟ್ವೀಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವುದನ್ನು ಮನಗಂಡ ಬಿಜೆಪಿ, ಟ್ವೀಟ್ ಮೂಲಕ ಸುಮಿತ್ರಾ ಮಹಾಜನ್ ಆರೋಗ್ಯವಾಗಿದ್ದಾರೆ. ವದಂತಿಗಳನ್ನು ನಂಬಬೇಡಿ ಎಂದಿದೆ. ತಕ್ಷಣವೇ ಶಶಿ ತರೂರ್ ಡಿಲೀಟ್ ಮಾಡಿದ್ದಲ್ಲದೆ, ಸುಳ್ಳು ಸುದ್ದಿಯನ್ನು ನಂಬಿ ಟ್ವೀಟ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪೋಷಕರು