Select Your Language

Notifications

webdunia
webdunia
webdunia
webdunia

ಮಗಳು ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪೋಷಕರು

ಮಗಳು ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪೋಷಕರು
ಹೈದರಾಬಾದ್ , ಶುಕ್ರವಾರ, 23 ಏಪ್ರಿಲ್ 2021 (06:44 IST)
ಹೈದರಾಬಾದ್ : ವಿವಾಹಕ್ಕೆ ಕೆಲವು ದಿನಗಳಿರುವಾಗಲೇ ಮಗಳು ತನ್ನ ಗೆಳೆಯನ ಜೊತೆ ಓಡಿ ಹೋದ ಕಾರಣ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಗಾರೆಡ್ಡಿ ಗ್ರಾಮೀಣ ವ್ಯಾಪ್ತಿಯಲ್ಲಿ ನಡೆದಿದೆ.

ತಂದೆ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದರು. ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಅವರ ಮದುವೆಗೆ ಹುಡುಗಿಯ ತಂದೆ ತಾಯಿ ಒಪ್ಪದ ಕಾರಣ ಮದುವೆಗೆ ಸ್ವಲ್ಪ ದಿನ ಇರುವಾಗಲೇ ತನ್ನ ಪ್ರೇಮಿಯ ಜೊತೆ ಓಡಿಹೋಗಿದ್ದಾಳೆ.

ಇದರಿಂದ ಅವಮಾನಗೊಂಡ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಸುವನ್ನು ಕೊಂದ ಹುಲಿಯ ಮೇಲೆ ಪ್ರತಿಕಾರ ತೀರಿಸಿಕೊಂಡು ಜೈಲು ಸೇರಿದ ಯುವಕರು