ಹೈದರಾಬಾದ್ : ನಟ ಸಾಯಿ ಧರ್ಮಂ ತೇಜ ಮತ್ತು ಐಶ್ವರ್ಯ ರಾಜೇಶ್ ಪ್ರಸ್ತುತ ಮುಂಬರುವ ಸಾಮಾಜಿಕ ಚಿತ್ರ ರಿಪಬ್ಲಿಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಚಿತ್ರದ ಬಿಟುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.
ಈ ಚಿತ್ರದ ನಿರ್ಮಾಪಕರು ಚಿತ್ರವನ್ನು ಜೂನ್ 4ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ರಿಪಬ್ಲಿಕ್ ಚಿತ್ರವನ್ನು ಮುಂದೂಡಲಾಗಿದೆ ಎನ್ನಲಾಗಿದೆ.
ದೇವ ಕಟ್ಟಾ ನಿರ್ದೇಶನದ ರಿಪಬ್ಲಿಕ್ ಚಿತ್ರ ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗವನ್ನು ಕೇಂದ್ರಕರಿಸಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಪ್ರಸ್ತುತ ತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.