Publish Date: Fri, 23 Apr 2021 (09:30 IST)
Updated Date: Fri, 23 Apr 2021 (09:33 IST)
ನವದೆಹಲಿ: ಕೊರೋನಾ ಪ್ರಕರಣ ಏರಿಕೆಯಾಗುತ್ತಿದ್ದಂತೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಆಕ್ಸಿಜನ್ ಪೂರೈಕೆದಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಆಕ್ಸಿಜನ್ ಉತ್ಪಾದನೆ ಹೆಚ್ಚಳ ಮಾಡುವುದು, ಸಾಗಣೆ ಮತ್ತು ವಿತರಣೆಯ ವೇಗ ಹೆಚ್ಚಿಸುವುದು, ಕ್ರಿಯಾತ್ಮಕ ಮಾರ್ಗಗಳ ಮೂಲಕ ಆರೋಗ್ಯ ವಲಯಕ್ಕೆ ತ್ವರಿತವಾಗಿ ಆಕ್ಸಿಜನ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ಚರ್ಚೆ ನಡೆಸಿದ್ದಾರೆ.
ಆಕ್ಸಿಜನ್ ಗಾಗಿ ಆಸ್ಪತ್ರೆಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ಈ ಸಭೆ ನಡೆಸಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ತಯಾರಕರೊಂದಿಗೆ ಮಾತುಕತೆ ನಡೆಸಿದ್ದಾರೆ.