Select Your Language

Notifications

webdunia
webdunia
webdunia
webdunia

ನಟಿ ಅನುಪ್ರಭಾಕರ್ ಗೆ ಕೊರೋನಾ ಪಾಸಿಟಿವ್

ನಟಿ ಅನುಪ್ರಭಾಕರ್ ಗೆ ಕೊರೋನಾ ಪಾಸಿಟಿವ್
ಬೆಂಗಳೂರು , ಗುರುವಾರ, 22 ಏಪ್ರಿಲ್ 2021 (10:17 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಒಬ್ಬೊಬ್ಬರೇ ಸ್ಟಾರ್ ಗಳು ಕೊರೋನಾ ಸೋಂಕಿತರಾಗುತ್ತಿದ್ದಾರೆ. ಇದಕ್ಕೀಗ ನಟಿ ಅನುಪ್ರಭಾಕರ್ ಲೇಟೆಸ್ಟ್ ಸೇರ್ಪಡೆಯಾಗಿದ್ದಾರೆ.


ತಮಗೆ ಕೊರೋನಾ ಪಾಸಿಟಿವ್ ಆಗಿರುವ ವಿಚಾರವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ನನಗೆ ಕೊರೋನಾ ಸೋಂಕು ತಗುಲಿದೆ. ಸದ್ಯಕ್ಕೆ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳುತ್ತಿದ್ದು, ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ನಟಿ ತಿಳಿಸಿದ್ದಾರೆ.

ಅನು ಪ್ರಭಾಕರ್ ಮನೆಯ ಇತರ ಸದಸ್ಯರಿಗೆ ಕೊರೋನಾ ಸೋಂಕು ತಗುಲಿಲ್ಲ. ಉಳಿದ ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಯಾರೂ ಎರಡನೆಯ ಅಲೆಯನ್ನು ಹಗುರವಾಗಿ ಪರಿಗಣಿಸಬೇಡಿ. ಸುರಕ್ಷಿತವಾಗಿರಿ ಎಂದು ನಟಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಯಿ ಧರ್ಮಂ ತೇಜ ಅಭಿನಯದ ‘ರಿಪಬ್ಲಿಕ್’ ಚಿತ್ರ ಬಿಡುಗಡೆಯ ದಿನ ಮುಂದೂಡಿಕೆ