Select Your Language

Notifications

webdunia
webdunia
webdunia
webdunia

ನೈಟ್ ಕರ್ಫ್ಯೂ ಬಗ್ಗೆ ಜನ ಏನಂತಿದ್ದಾರೆ?

ನೈಟ್ ಕರ್ಫ್ಯೂ ಬಗ್ಗೆ ಜನ ಏನಂತಿದ್ದಾರೆ?
ಬೆಂಗಳೂರು , ಗುರುವಾರ, 22 ಏಪ್ರಿಲ್ 2021 (09:30 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ಈ ಬಗ್ಗೆ ಜನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ?


ನೈಟ್ ಕರ್ಫ್ಯೂ ಇದ್ದರೂ ರಾತ್ರಿ ಸಾರಿಗೆ ವ್ಯವಸ್ಥೆ ರದ್ದಾಗಿಲ್ಲ. ಹೀಗಾಗಿ ಜನರಿಗೆ ತಮ್ಮ ಗಮ್ಯ ಸ್ಥಾನಕ್ಕೆ ತಲುಪಲು ಕಷ್ಟವಾಗದು. ಆದರೆ ಇದರಿಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಸಮಾರಂಭಗಳು, ಹೋಟೆಲ್ ಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೇ ಹೋಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ ಮತ್ತೆ ಕೆಲವರು, ಇಷ್ಟು ದಿನ ತಡ ಮಾಡಿ ಕರ್ಫ್ಯೂ ವಿಧಿಸಿರುವುದರಿಂದ ಕೊರೋನಾ ಮೇಲೆ ಯಾವ ಪರಿಣಾಮವೂ ಬೀರದು. ಇನ್ನು, ಕೆಲವರು ಮೊದಲು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಷ್ಕರ ಅಂತ್ಯ: ಕೊನೆಗೂ ಶುರುವಾಯ್ತು ಸಾರಿಗೆ ಬಸ್