Publish Date: Wed, 21 Apr 2021 (09:46 IST)
Updated Date: Wed, 21 Apr 2021 (09:47 IST)
ಬೆಂಗಳೂರು: ಈಗ ಎಲ್ಲಿ ನೋಡಿದರೂ ಕೊರೋನಾದ್ದೇ ಸುದ್ದಿ. ಇದರಿಂದಾಗಿ ಜನರಲ್ಲಿ ಮನೆಯಿಂದ ಹೊರಗೆ ಬರಲೂ ಭಯ ಉಂಟಾಗಿದೆ. ಆದರೆ ದಯವಿಟ್ಟು ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ನಟ ಜಕೆ ಮನವಿ ಮಾಡಿದ್ದಾರೆ.
ಕೊರೋನಾ ಕುರಿತಾಗಿ ಕಾಳಜಿ ವಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿರುವ ಜೆಕೆ, ಕಾಳಜಿ ಇರಲಿ, ಆದರೆ ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಕೆಲವು ಸುದ್ದಿಗಳನ್ನು ನೋಡುತ್ತಿದ್ದರೆ ನಮ್ಮ ಮನೆಯಲ್ಲೂ ಅಪ್ಪ-ಅಮ್ಮನಿಗೂ ಆತಂಕ ಶುರುವಾಗಿದೆ. ಸಾಧ್ಯವಾದರೆ ಇನ್ನೊಬ್ಬರಿಗೂ ಸಕಾರಾತ್ಮಕವಾಗಿರಲು ತಿಳಿಸೋಣ. ಇಂತಹ ಹಲವು ರೋಗಗಳೊಂದಿಗೆ ನಾವು ಸುದೀರ್ಘ ಕಾಲದಿಂದ ಹೋರಾಡುತ್ತಲೇ ಬಂದಿದ್ದೇವೆ. ಆದಷ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸ್ ಮಾಡುತ್ತಾ ಫಿಟ್ ಆಗಿರುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸೋಣ. ಜನಗಳೇ, ದಯವಿಟ್ಟು ಯಾರೂ ಭಯಪಡಬೇಡಿ. ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ. ಇನ್ನೊಬ್ಬರಿಗೂ ಜವಾಬ್ಧಾರಿಯುತ ವ್ಯಕ್ತಿಗಳಾಗಿ ತಿಳಿ ಹೇಳೋಣ ಎಂದಿದ್ದಾರೆ.