ಬೆಂಗಳೂರು: ಸದ್ಯಕ್ಕೆ ದೇಶದಲ್ಲಿ ಕೊರೋನಾ ಎರಡನೇ ಅಲೆ ರುದ್ರತಾಂಡವವಾಡುತ್ತಿದೆ. ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಗಾಗಿ ಹಾಹಾಕಾರವೆದ್ದಿದೆ. ಅಷ್ಟಕ್ಕೂ ಎರಡನೇ ಅಲೆಯಲ್ಲಿ ಆಕ್ಸಿಜನ್ ಗೆ ಇಷ್ಟೊಂದು ಬೇಡಿಕೆ ಬರಲು ಕಾರಣವೇನು ಗೊತ್ತಾ?
ಈ ಬಾರಿ ಬಂದಿರುವ ಕೊರೋನಾ ಹೆಚ್ಚಿನ ಜನರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಮಾಡಿದೆ. ಕೊರೋನಾ 2 ಪ್ರಮುಖ ಲಕ್ಷಣಗಳಲ್ಲಿ ಉಸಿರಾಟದ ಸಮಸ್ಯೆ ಪ್ರಮುಖವಾಗುತ್ತಿದೆ. ವಿಶೇಷವೆಂದರೆ ಉಸಿರಾಟದ ಸಮಸ್ಯೆ ಈ ಹಿಂದೆ ಇಲ್ಲದವರಿಗೂ, ಆರೋಗ್ಯವಂತರಲ್ಲೂ ಕೊರೋನಾ ಬಂದಾಗ ಈ ಲಕ್ಷಣ ಕಾಣುತ್ತಿದೆ.
ಇದರಿಂದಾಗಿ ಆಕ್ಸಿಜನ್ ಸಪೋರ್ಟ್ ನೀಡುವುದು ಆಸ್ಪತ್ರೆಗಳಿಗೆ ಅನಿವಾರ್ಯವಾಗುತ್ತಿದೆ. ಇದರಿಂದಾಗಿ ಆಕ್ಸಿಜನ್ ಗೆ ಬೇಡಿಕೆಯೂ ಹೆಚ್ಚಿದೆ.