Publish Date: Tue, 20 Apr 2021 (10:16 IST)
Updated Date: Tue, 20 Apr 2021 (10:18 IST)
ನವದೆಹಲಿ: ಮೊನ್ನೆಯಷ್ಟೇ ಪ್ರಧಾನಿ ಮೋದಿಗೆ ಕೊರೋನಾ ನಿಯಂತ್ರಿಸಲು ಪಂಚಸೂತ್ರಗಳ ಸಲಹೆ ನೀಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೂ ಈಗ ಕೊರೋನಾ ತಗುಲಿದೆ.
ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮನಮೋಹನ್ ಸಿಂಗ್ ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಣ್ಣ ಪ್ರಮಾಣದಲ್ಲಿ ಜ್ವರವಿದ್ದುದರಿಂದ ಮನಮೋಹನ್ ಸಿಂಗ್ ಪರೀಕ್ಷೆಗೊಳಗಾಗಿದ್ದರು.
ಕೊರೋನಾ ನಿಯಂತ್ರಿಸಲು ಪ್ರಧಾನಿ ಮೋದಿಗೆ ವಿವಿಧ ಅಂಶಗಳ ಕಾರ್ಯಸೂಚಿಯ ಸಲಹೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಅವರೂ ಸೋಂಕಿಗೊಳಗಾಗಿರುವುದು ವಿಪರ್ಯಾಸ.