Select Your Language

Notifications

webdunia
webdunia
webdunia
webdunia

ಭಾರತಕ್ಕೆ ಪ್ರಯಾಣ ಮಾಡಬೇಡಿ: ನಾಗರಿಕರಿಗೆ ಸಲಹೆ ನೀಡಿದ ಅಮೆರಿಕಾ ಆರೋಗ್ಯ ಇಲಾಖೆ

ಭಾರತಕ್ಕೆ ಪ್ರಯಾಣ ಮಾಡಬೇಡಿ: ನಾಗರಿಕರಿಗೆ ಸಲಹೆ ನೀಡಿದ ಅಮೆರಿಕಾ ಆರೋಗ್ಯ ಇಲಾಖೆ
ನ್ಯೂಯಾರ್ಕ್ , ಮಂಗಳವಾರ, 20 ಏಪ್ರಿಲ್ 2021 (09:50 IST)
ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸದ್ಯದ ಮಟ್ಟಿಗೆ ಭಾರತ ಪ್ರಯಾಣ ಮಾಡಬೇಡಿ ಎಂದು ಅಮೆರಿಕಾ ಆರೋಗ್ಯ ಇಲಾಖೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.


ವ್ಯಾಕ್ಸಿನ್ ಪಡೆದವರೂ ಸದ್ಯಕ್ಕೆ ಭಾರತ ಪ್ರಯಾಣ ಮಾಡುವುದು ಅಪಾಯಕಾರಿ. ಒಂದು ವೇಳೆ ನೀವು ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕು ಎಂದಾದರೆ ಸಂಪೂರ್ಣವಾಗಿ ವ್ಯಾಕ್ಸಿನ್ ಡೋಸ್ ಪಡೆದುಕೊಂಡೇ ತೆರಳಿ’ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಬ್ರಿಟನ್ ಪ್ರಧಾನಿ ಬೋರಿಸ್ ಕೊರೋನಾ ಹಿನ್ನಲೆಯಲ್ಲಿ ಭಾರತ ಪ್ರವಾಸ ಮುಂದೂಡಿದ ಬೆನ್ನಲ್ಲೇ ಅಮೆರಿಕಾ ಕೂಡಾ ತನ್ನ ನಾಗರಿಕರಿಗೆ ಈ ಎಚ್ಚರಿಕೆ ನೀಡಿದೆ. ಬ್ರಿಟನ್ ಈಗಾಗಲೇ ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಆದ ಶಾಸಕ ರೇಣುಕಾಚಾರ್ಯ