Publish Date: Mon, 19 Apr 2021 (10:14 IST)
Updated Date: Mon, 19 Apr 2021 (10:15 IST)
ಬೆಂಗಳೂರು: ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುವ ರೀತಿಗೆ ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಕೆಂಡಾಮಂಡಲರಾಗಿದ್ದಾರೆ.
ವಿಡಿಯೋ ಸಂದೇಶ ಮೂಲಕ ಸರ್ಕಾರಕ್ಕೆ ನನ್ನ ಡೆತ್ ನೋಟ್ ಎಂದು ಹೇಳಿರುವ ಗುರುಪ್ರಸಾದ್, ಸಿಎಂ ಯಡಿಯೂರಪ್ಪ ಬರೀ ದುಡ್ಡು ಮಾಡೋದಷ್ಟೇ ಅಲ್ಲ. ಬಡವರ ಪರ ಕೆಲಸ ಮಾಡಿ. ಕೋಟಿ ಕೋಟಿಯನ್ನು ಇಡ್ಲಿ ಥರಾ ಮನೆಯ ಲಾಕರ್ ನಲ್ಲಿ ಇಡಬೇಡಿ. ಸಿನಿಮಾರಂಗ ನೆಲಕಚ್ಚಿದೆ. ನೀವು ನಿಮ್ಮ ಮನಸ್ಸಿಗೆ ಬಂದ ಥರಾ ವರ್ತಿಸುತ್ತಿದ್ದೀರಾ? ಮೊದಲೇ ಪ್ಲ್ಯಾನ್ ಮಾಡುವ ಬದಲು ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕುತ್ತಿದ್ದೀರಾ? ಮಾಡೋ ಕೆಲಸ ಬಿಟ್ಟು ಸಿಡಿ ಇಟ್ಕೊಂಡು ಇದ್ದೀರಾ? ಥೂ.. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೇವಲ ಸಿಎಂ ಯಡಿಯೂರಪ್ಪ ಮಾತ್ರವಲ್ಲ, ಡಿಕೆಶಿ, ಎಚ್ ಡಿಕೆ ಯಾರೂ ಸಾಚಾ ಅಲ್ಲ. ಆರೋಗ್ಯ ಮಂತ್ರಿ ಸುಧಾಕರ್ ನೀನು ನಿಜಕ್ಕೂ ಡಾಕ್ಟ್ರಾ? ಜನರ ಸಾವಿಗೆ ನೀನೇ ಹೊಣೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.