Select Your Language

Notifications

webdunia
webdunia
webdunia
webdunia

ಮತ್ತೆ ಕಾಡಿನ ದಾರಿ ಹಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮತ್ತೆ ಕಾಡಿನ ದಾರಿ ಹಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಸೋಮವಾರ, 19 ಏಪ್ರಿಲ್ 2021 (09:34 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಕ್ಯಾಮರಾ ಆತುಕೊಂಡು ಕಾಡಿನ ಹಾದಿ ಹಿಡಿಯುತ್ತಾರೆ. ಈಗ ಹೇಳಿ ಕೇಳಿ ಅವರು ಅರಣ್ಯ ಇಲಾಖೆಯ ರಾಯಭಾರಿ ಕೂಡಾ.


ಇದೀಗ ರಾಬರ್ಟ್ ಬಿಡುಗಡೆಯಾದ ಬಳಿಕ ಸಿಕ್ಕ ಬಿಡುವಿನ ಸಮಯದಲ್ಲಿ ದರ್ಶನ್ ಮತ್ತೆ ಕಾಡಿನ ಹಾದಿ ಹಿಡಿದಿದ್ದಾರೆ. ಚಿಕ್ಕಮಗಳೂರಿನ ಮುತ್ತೋಡಿ ಕಾನನ ಪ್ರದೇಶದಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾರೆ.

ಎಂದಿನಂತೆ ದರ್ಶನ್ ಆಪ್ತ ಗೆಳೆಯರು ಅವರಿಗೆ ಜೊತೆಯಾಗಿದ್ದಾರೆ. ಕ್ಯಾಮರಾ ಹಿಡಿದುಕೊಂಡು ವನ್ಯ ಜೀವಿಗಳ ಫೋಟೋಗ್ರಫಿ ಮಾಡುತ್ತಾ, ತಮ್ಮ ಮೇಲಿನ ಅಭಿಮಾನದಿಂದ ಸೆಲ್ಫೀ ಕೇಳಿಕೊಂಡು ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಪೋಸ್ ನೀಡುತ್ತಾ ಜಾಲಿಯಾಗಿ ಕಾಲ ಕಳೆದಿದ್ದಾರೆ ದರ್ಶನ್.

Share this Story:

Follow Webdunia kannada

ಮುಂದಿನ ಸುದ್ದಿ

‘ಸರ್ಕಾರು ವಾರಾ ಪಾಟಾ’ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರಂತೆ ಈ ಸ್ಟಾರ್ ನಟ