Publish Date: Wed, 21 Apr 2021 (10:12 IST)
Updated Date: Wed, 21 Apr 2021 (10:13 IST)
ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಕಿಗೂ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಇಬ್ಬರನ್ನೂ ರಾಂಚಿಯ ಪಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಧೋನಿ ಐಪಿಎಲ್ ಆಡಲು ಮುಂಬೈನಲ್ಲಿದ್ದರೆ, ಅತ್ತ ಅವರ ಕುಟುಂಬಕ್ಕೆ ಕೊರೋನಾ ಆತಂಕ ಕಾಡಿದೆ. ಸದ್ಯಕ್ಕೆ ಅವರ ಇತರ ಕುಟುಂಬ ಸದಸ್ಯರ ಮಾಹಿತಿ ತಿಳಿದುಬಂದಿಲ್ಲ.
ಕೊರೋನಾ ದೃಢಪಟ್ಟ ಬೆನ್ನಲ್ಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಯಾವುದೇ ಆತಂಕವಿಲ್ಲ ಎನ್ನಲಾಗಿದೆ.