Publish Date: Thu, 22 Apr 2021 (09:41 IST)
Updated Date: Thu, 22 Apr 2021 (09:43 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ವಿಭಿನ್ನ ಪಾತ್ರಗಳ ಸಿನಿಮಾ ಮೂಲಕ ಜನರಿಗೆ ಇಷ್ಟವಾಗುತ್ತಿದ್ದಾರೆ. ಇದೀಗ ಪ್ರಿಯಾಂಕ ಮತ್ತೊಂದು ಹೊಸ ಬಗೆಯ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿರುವ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ಪ್ರಿಯಾಂಕ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಈ ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ಪ್ರಿಯಾಂಕ ಇದ್ದಾರೆ. ತಮ್ಮ ಪಾಲಿಗೆ ಈ ಸಿನಿಮಾದ ಪಾತ್ರ ವಿಶೇಷವಾಗಿದೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ. ಇದೀಗ ಚಿತ್ರೀಕರಣ ಮುಗಿದಿದ್ದು, ನಿಮ್ಮೆದುರು ಬರಲು ಕಾತುರದಿಂದ ಕಾಯತ್ತಿದ್ದೇನೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.