Publish Date: Wed, 21 Apr 2021 (10:02 IST)
Updated Date: Wed, 21 Apr 2021 (10:04 IST)
ಬೆಂಗಳೂರು: ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿರುವ ದೃಶ್ಯಂ 2 ಸಿನಿಮಾ ಕನ್ನಡಕ್ಕೂ ರಿಮೇಕ್ ಆಗಲಿದೆ. ದೃಶ್ಯ 1 ಕೂಡಾ ಕನ್ನಡದಲ್ಲಿ ರಿಮೇಕ್ ಆಗಿತ್ತು.
ಈ ಸಿನಿಮಾದಲ್ಲಿ ರವಿಚಂದ್ರನ್ ನಾಯಕರಾಗಿದ್ದರು. ಎರಡನೇ ಭಾಗದಲ್ಲೂ ಅವರೇ ನಾಯಕರಾಗಲಿದ್ದಾರೆ. ಅದರ ಜೊತೆಗೆ ಎರಡನೇ ಭಾಗದಲ್ಲಿ ನಟ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರ ಮಾಡಲಿದ್ದಾರೆ.
ಮಲಯಾಳಂ ಸಿನಿಮಾದಲ್ಲಿ ಹೊಸದಾಗಿ ನೇಮಕವಾಗುವ ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ ಅಧಿಕಾರಿಯಾಗಿ ಮುರಳಿಗೋಪಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪ್ರಮೋದ್ ಶೆಟ್ಟಿ ಮಾಡಲಿದ್ದಾರೆ. ಖಡಕ್ ಆಫೀಸರ್ ಆಗಿ ರಾಜೇಂದ್ರ ಪೊನ್ನಪ್ಪ ಕುಟುಂಬವನ್ನು ತನಿಖೆಗೊಳಪಡಿಸಲಿದ್ದಾರೆ ಪ್ರಮೋದ್.