ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಬರೆದ ಪತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
									
										
								
																	
ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿದ್ದು, ಸಾಮಾನ್ಯ ಜನರು ಚಿಕಿತ್ಸೆಗಾಗಿ ಪರದಾಡುತ್ತಿರುವಾಗ ಅವರಿಗೆ ಸ್ಟಾರ್ ಗಳು ನೆರವಾಗಬೇಕು ಎಂದು ವೀರಕಪುತ್ರ ಶ್ರೀನಿವಾಸ್ ಬಹಿರಂಗಪತ್ರದಲ್ಲಿ ಮನವಿ ಮಾಡಿದ್ದಾರೆ.
 
									
			
			 
 			
 
 			
			                     
							
							
			        							
								
																	ನಿಮಗೆ ಏನೇ ನೋವಾದರೂ ಅಭಿಮಾನಿಗಳು ಪೂಜೆ, ಹರಕೆ ಕಟ್ಟಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಅವರಿಗೆ ನೋವಾದಾಗ ಕಣ್ಣೊರೆಸಬೇಕಾಗಿರುವುದು ನೀವೇ ಅಲ್ಲವೇ? ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳ ಕಷ್ಟಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
									
										
								
																	ನಿಮ್ಮನ್ನೇ ಇಡೀ ಜೀವನ ಆರಾಧ್ಯ ದೈವದಂತೆ ಪೂಜಿಸುವ ಅಭಿಮಾನಿಗಳ ಪರಿಚಯ ನಿಮಗಿರಲ್ಲ. ಯಾಕೆಂದರೆ ನೀವು ಯಾರೆಂದು ಅವರಿಗೆ ಗೊತ್ತಿರುತ್ತದೆ. ಆದರೆ ನಿಮಗೆ ಪ್ರತಿಯೊಬ್ಬರನ್ನೂ ಗುರುತಿಸಲು ಸಾಧ‍್ಯವಾಗದು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇ ಹೋಂ, ಸ್ಟೇ ಸೇಫ್ ಅಂತ ಪುಕ್ಸಟೆ ಮೆಸೇಜ್ ಹಾಕುವ ಬದಲು ನಿಮ್ಮ ಒಡೆತನದಲ್ಲಿ ಫಾರ್ಮ್ ಹೌಸ್, ಕಲ್ಯಾಣ ಮಂಟಪಗಳೋ, ನಿಮಗೆ ಗೊತ್ತಿರುವ ಜಾಗಗಳಲ್ಲಿ ಕೊರೋನಾ ರೋಗಿಗಳಿಗೆ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಿ ಎಂದು ವೀರಕಪುತ್ರ ಶ್ರೀನಿವಾಸ್ ಸುದೀರ್ಘ ಪತ್ರದ ಮೂಲಕ ಮನವಿ ಮಾಡಿದ್ದಾರೆ.