Publish Date: Tue, 20 Apr 2021 (09:42 IST)
Updated Date: Tue, 20 Apr 2021 (09:43 IST)
ಬೆಂಗಳೂರು: ಕಿರುತೆರೆಯ ಖ್ಯಾತ ಜೋಡಿ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಆದರೆ ಈಗ ಮದುವೆಗೆ ಕೊರೋನಾ ಅಡ್ಡಿಯಾಗಿದೆ. ಹೀಗಾಗಿ ಚಂದನ್ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮದುವೆ ಹೇಗಿರಬೇಕು ಎಂದು ಅಭಿಮಾನಿಗಳ ಸಲಹೆ ಕೇಳಿದ್ದಾರೆ.
ನಮ್ಮ ಮದುವೆ ನಮ್ಮಿಬ್ಬರ ಕುಟುಂಬದ ನಡುವೆ ಮಾತ್ರವಿರಬೇಕೇ ಅಥವಾ ಎಲ್ಲರ ಸಮ್ಮುಖದಲ್ಲಿ ನಡೆಯಬೇಕೇ? ಎಂದು ಚಂದನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಬಹುಪಾಲು ಜನರು ನಿಮ್ಮಿಬ್ಬರ ಕುಟುಂಬದ ನಡುವೆ ನಡೆಯಲಿ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಮದುವೆ ದಿನಾಂಗ ಘೋಷಿಸಿರಲಿಲ್ಲ.