Publish Date: Tue, 27 Apr 2021 (09:44 IST)
Updated Date: Tue, 27 Apr 2021 (09:45 IST)
ಬೆಂಗಳೂರು: ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ಲಾಕ್ ಡೌನ್ ವಿಧಿಸಿರುವ ಸರ್ಕಾರದ ನಿರ್ಧಾರದ ಬಗ್ಗೆ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಲಾಕ್ ಡೌನ್ ಮಾಡಿರುವುದಕ್ಕೆ ವ್ಯಾಪಾರಿಗಳು, ದಿನಗೂಲಿ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಗಾರ್ಮೆಂಟ್ ಉದ್ಯೋಗಿಗಳನ್ನು ಹೊರತುಪಡಿಸಿ ಕೈಗಾರಿಕೆಗಳಿಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಚಾಲಕರು ಇಎಂಐ ಕಟ್ಟೋದು ಹೇಗೆ ಎಂದು ಪ್ರಶ್ನಿಸಿದರೆ ನೌಕರರು ಮನೆ ಬಾಡಿಗೆ ತೆಗೆದುಕೊಳ್ಳಬಾರದು ಎಂದೂ ಘೋಷಣೆ ಮಾಡಿ ಎಂದಿದ್ದಾರೆ. ಇನ್ನು, ವ್ಯಾಪಾರಸ್ಥರು ಅಂಗಡಿ ಬಾಡಿಗೆ ಮನ್ನಾ ಮಾಡಿ ಎಂದಿದ್ದಾರೆ. ಒಟ್ಟಾರೆ ಕೊರೋನಾಗಿಂತ ಎಲ್ಲರಿಗೂ ಜೀವನೋಪಾಯದ್ದೇ ಚಿಂತೆಯಾಗಿದೆ.