ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಇರುವ ಮಂದಿಗೆ ಮನರಂಜಿಸಲು ಸದ್ಯಕ್ಕೆ ಇರುವುದು ಕಿರುತೆರೆ ಲೋಕ. ಅದರಲ್ಲೂ ಬಿಗ್ ಬಾಸ್ ಶೋ ನಿಲುಗಡೆಯಾಗುವ ಬಗ್ಗೆ  ಯಾವುದೇ ಸೂಚನೆ ಬಂದಿಲ್ಲ.
									
										
								
																	
ಹೀಗಾಗಿ ಈ ಒಂದು ಶೋ ನಿಮ್ಮನ್ನು ಮನರಂಜಿಸಬಹುದು. ಉಳಿದಂತೆ ಧಾರವಾಹಿಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಹೀಗಾಗಿ ಬ್ಯಾಂಕಿಂಗ್ ಎಪಿಸೋಡ್ ಮುಗಿದ ಬಳಿಕ ಧಾರವಾಹಿ ಹೊಸ ಎಪಿಸೋಡ್ ಗಳು ಪ್ರಸಾರವಾಗದು.
									
			
			 
 			
 
 			
			                     
							
							
			        							
								
																	ಒಂದು ವೇಳೆ ಸೂಚನೆ ಬಂದರೆ ಬಿಗ್ ಬಾಸ್ ಶೋ ಕೂಡಾ ನಿಲುಗಡೆಯಾಗಬಹುದು. ಆದರೆ ಸದ್ಯಕ್ಕೆ ಅದನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಸೂಚನೆಯಿಲ್ಲ. ಹೀಗಾಗಿ ಇದೊಂದು ಶೋ ಫ್ರೆಶ್ ಎಪಿಸೋಡ್ ಗಳು ಲಾಕ್ ಡೌನ್ ಸಮಯದಲ್ಲಿ ನಿಮ್ಮನ್ನು ಮನರಂಜಿಸಬಹುದು.