Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮುಕ್ತಾಯ ಸುದ್ದಿ ತಿಳಿದು ಕಣ್ಣೀರು ಹಾಕಿದ ಸ್ಪರ್ಧಿಗಳು

ಬಿಗ್ ಬಾಸ್ ಮುಕ್ತಾಯ ಸುದ್ದಿ ತಿಳಿದು ಕಣ್ಣೀರು ಹಾಕಿದ ಸ್ಪರ್ಧಿಗಳು
ಬೆಂಗಳೂರು , ಸೋಮವಾರ, 10 ಮೇ 2021 (09:22 IST)
ಬೆಂಗಳೂರು: ಕೊರೋನಾ ಹಾವಳಿಯಿಂದಾಗಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅರ್ಧಕ್ಕೇ ಮುಕ್ತಾಯಗೊಳ್ಳುತ್ತಿರುವ ಸುದ್ದಿ ತಿಳಿದು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.


ಇಂದು ಸ್ಪರ್ಧಿಗಳಿಗೆ ಬಿಗ್ ಬಾಸ್ ಮುಕ್ತಾಯವಾಗುವ ಸುದ್ದಿಯನ್ನು ತಿಳಿಸುವ ಸಾಧ‍್ಯತೆಯಿದೆ. ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತು ಲಾಕ್ ಡೌನ್ ವಿಚಾರವನ್ನು ಬ್ರೇಕಿಂಗ್ ನ್ಯೂಸ್ ಆಗಿ ಸ್ಪರ್ಧಿಗಳಿಗೆ ಹೇಳಲಾಗಿದೆ. ಈ ವೇಳೆ ಎಲ್ಲರೂ ಶಾಕ್ ಆಗಿ ಕಣ್ಣೀರು ಹಾಕುತ್ತಿರುವ ದೃಶ್ಯಗಳನ್ನು ಕಲರ್ಸ್ ವಾಹಿನಿ ಪ್ರೋಮೋ ಮೂಲಕ ಹರಿಯಬಿಟ್ಟಿದೆ.

ಮೂಲಗಳ ಪ್ರಕಾರ ಇಂದಿಗೇ ಬಿಗ್ ಬಾಸ್ ಮುಕ್ತಾಯವಾಗುತ್ತಿಲ್ಲ. ಉಳಿದ ಎಪಿಸೋಡ್ ಗಳನ್ನು ಪ್ರಸಾರ ಮಾಡುತ್ತಿದ್ದ ಬುಧವಾರದವರೆಗೂ ಸಂಚಿಕೆ ಪ್ರಸಾರವಾಗಲಿದೆ. ತಾವೇ ಗೆಲ್ಲುವುದು ಎಂದು ಕನಸು ಕಾಣುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ 70 ದಿನಕ್ಕೇ ಅಂತ್ಯಗೊಳ್ಳುತ್ತಿದೆ ಎಂದು ಗೊತ್ತಾಗಿ ಪರಸ್ಪರ ಆಲಂಗಿಸಿ ಅತ್ತು ಬೇಸರ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಅಗಲುವಿಕೆ ದುಃಖದಲ್ಲಿ ಮಾಲಾಶ್ರೀ ಹೇಳಿದ್ದೇನು?