Select Your Language

Notifications

webdunia
webdunia
webdunia
webdunia

ಪತಿಯ ಅಗಲುವಿಕೆ ದುಃಖದಲ್ಲಿ ಮಾಲಾಶ್ರೀ ಹೇಳಿದ್ದೇನು?

ಮಾಲಾಶ್ರೀ
ಬೆಂಗಳೂರು , ಸೋಮವಾರ, 10 ಮೇ 2021 (09:15 IST)
ಬೆಂಗಳೂರು: ಕೊರೋನಾ ಕಾರಣದಿಂದ ಅಕಾಲಿಕವಾಗಿ ಪತಿ ರಾಮು ಅವರನ್ನು ಕಳೆದುಕೊಂಡ ನಟಿ ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಪ್ರಕಟಿಸಿದ್ದಾರೆ.


ಪತಿಯ 11 ನೇ ದಿನದ ಕಾರ್ಯ ಮುಗಿಸಿದ ಬಳಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ದುಃಖ ಹಂಚಿಕೊಂಡಿದ್ದಾರೆ. ಜೊತೆಗೆ ಕಷ್ಟದ ಸಮಯದಲ್ಲಿ ತಮಗೆ ಜೊತೆಯಾಗಿ ನಿಂತ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

‘ಈ ಸಂಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ ನನಗೆ ಬೆಂಬಲ ನೀಡಿದೆ. ಅದಕ್ಕೆ ಚಿರಋಣಿ. ಕಳೆದ 12 ದಿನಗಳು ನನ್ನ ಪಾಲಿಗೆ ತೀರಾ ಕಠಿಣ ದಿನಗಳಾಗಿದ್ದವು. ನನ್ನ ಪ್ರೀತಿಯ ಪತಿಯನ್ನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದೆ. ಈ ಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ ನನ್ನ ಜೊತೆಗಿತ್ತು. ನನಗೆ ಬೆಂಬಲ ನೀಡಿದ ಚಿತ್ರರಂಗ, ಮಾಧ್ಯಮಗಳು, ಅಭಿಮಾನಿಗಳಿಗೆ ಎಲ್ಲರಿಗೂ ಧನ್ಯವಾದಗಳು’ ಎಂದು ಮಾಲಾಶ್ರೀ ಭಾವುಕರಾಗಿ ಸಂದೇಶ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಇಲ್ಲ, ಕಿರುತೆರೆಯ ಧಾರವಾಹಿಗಳ ಕತೆಯೇನು?