Publish Date: Mon, 10 May 2021 (09:11 IST)
Updated Date: Mon, 10 May 2021 (09:13 IST)
ಬೆಂಗಳೂರು: ಅತ್ತ ಲಾಕ್ ಡೌನ್ ವೇಳೆ ಮನರಂಜನೆ ಒದಗಿಸುತ್ತಿದ್ದ ಬಿಗ್ ಬಾಸ್ ಶೋ ಕೂಡಾ ನಿಂತು ಹೋಗಿದೆ. ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಕೂಡಾ ಈ ವಾರ ಬಂದ್ ಆಗುತ್ತಾ?
ಹೀಗೊಂದು ಬೇಸರ, ಆತಂಕ ಧಾರವಾಹಿ ಪ್ರೇಕ್ಷಕರಲ್ಲಿದೆ. ಮೂಲಗಳ ಪ್ರಕಾರ ಲಾಕ್ ಡೌನ್ ಬಗ್ಗೆ ಮೊದಲೇ ಮುನ್ಸೂಚನೆ ದೊರೆತಿದ್ದ ಎಲ್ಲಾ ವಾಹಿನಿಗಳು ಸಾಕಷ್ಟು ಎಪಿಸೋಡ್ ಬ್ಯಾಂಕಿಂಗ್ ನಡೆಸಿವೆ. ಹೀಗಾಗಿ ಮುಂದಿನ ಎರಡು ವಾರಕ್ಕೆ ಸಮಸ್ಯೆಯಾಗದು.
ಅದೂ ಅಲ್ಲದೆ, ಈಗಾಗಲೇ ಎಪಿಸೋಡ್ ಗಳ ಅವಧಿ ಕಡಿತ, ಟೈಟಲ್ ಹಾಡುಗಳ ಪ್ರಸಾರ ಮಾಡುವ ಮೂಲಕ ಆದಷ್ಟು ಎಪಿಸೋಡ್ ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ವಾರ ಹೊಸ ಎಪಿಸೋಡ್ ಗಳ ಪ್ರಸಾರ ಇರಬಹುದು. ಆದರೆ ಅದಾದ ಬಳಿಕವೂ ಚಿತ್ರೀಕರಣಕ್ಕೆ ಅನುಮತಿ ದೊರೆಯದಿದ್ದರೆ ಅನ್ಯ ಮಾರ್ಗಗಳ ಬಗ್ಗೆ ಚಿಂತಿಸಲಿವೆ.