Select Your Language

Notifications

webdunia
webdunia
webdunia
webdunia

ಸಂತ್ರಸ್ತರ ಹಸಿವು ನೀಗಿಸುತ್ತಿರುವ ಕಿರುತೆರೆ ನಟ ಕಿರಣ್ ರಾಜ್ ಮತ್ತು ಬಳಗ

ಸಂತ್ರಸ್ತರ ಹಸಿವು ನೀಗಿಸುತ್ತಿರುವ ಕಿರುತೆರೆ ನಟ ಕಿರಣ್ ರಾಜ್ ಮತ್ತು ಬಳಗ
ಬೆಂಗಳೂರು , ಭಾನುವಾರ, 9 ಮೇ 2021 (09:53 IST)
ಬೆಂಗಳೂರು: ಕೊರೋನಾ ಸಮಯದಲ್ಲಿ ಎಷ್ಟೋ ಜನರ ಬಾಳು ಬೀದಿಗೆ ಬಿದ್ದಿದೆ. ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕೆಲಸವಿಲ್ಲದೇ, ದುಡ್ಡಿಲ್ಲದೇ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇನ್ನು, ಕೆಲವರು ಕೊರೋನಾ ಪೀಡಿತರಾಗಿ ಹೊರಗೆಯೂ ಹೋಗಲಾರದೇ ಮನೆಯಲ್ಲೂ ಅಡುಗೆ ಮಾಡಲಾರದೇ ತೊಂದರೆ ಅನುಭವಿಸುತ್ತಿದ್ದಾರೆ.


ಇಂತಹವರಿಗೆ ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಮತ್ತು ಅವರ ಬಳಗ ನೆರವು ನೀಡುತ್ತಿದ್ದಾರೆ. ಕಿರಣ್ ರಾಜ್ ತಮ್ಮ ‘ಕಿರಣ್ ಫೌಂಡೇಷನ್’ ವತಿಯಿಂದ ಹಸಿದವರಿಗೆ ಅನ್ನ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ಎಷ್ಟೋ ಮನೆಗಳಲ್ಲಿ ಕೊರೋನಾ ಸೋಂಕಿತರಾಗಿ ಹೊರಗೆ ಹೋಗಲಾರದೇ ಮನೆಯಲ್ಲೂ ಅಡುಗೆ ಮಾಡಿಕೊಳ್ಳಲಾಗದ ಸ್ಥಿತಿಯಿದೆ. ಇನ್ನು ಹಲವರು ಬೇರೆ ಊರುಗಳಿಗೆ ಇಲ್ಲಿ ಬಂದು ಈಗ ಕೆಲಸವಿಲ್ಲದೇ ಊಟಕ್ಕಾಗಿ ಪರದಾಡುತ್ತಿರುವ ಕಾರ್ಮಿಕರಿದ್ದಾರೆ. ಅಂತಹವರಿಗೆ ಊಟ ಒದಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ನನ್ನ ಜೊತೆ ಊಟ ಸರಬರಾಜು ಮಾಡಲು ಸ್ವಯಂ ಸೇವಕರಾಗಿ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಸದ ರಾಶಿ ನಡುವೆ ಸಂಜನಾ ಗಲ್ರಾನಿ ಫೋಟೋ ಶೂಟ್