Select Your Language

Notifications

webdunia
webdunia
webdunia
webdunia

ಮಹಾನಾಯಕ ಧಾರವಾಹಿಗೆ ಸಿಎಂ ಬೊಮ್ಮಾಯಿ ಎಂಟ್ರಿ!

webdunia
ಬೆಂಗಳೂರು , ಗುರುವಾರ, 19 ಆಗಸ್ಟ್ 2021 (10:18 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದಾದಾಸಾಹೇಬ್ ಅಂಬೇಡ್ಕರ್ ಜೀವನ ಕುರಿತಾದ ಮಹಾನಾಯಕ ಧಾರವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ ಸಿಕ್ಕಿದೆ.


ಇದೀಗ ಧಾರವಾಹಿಯಲ್ಲಿ ಅಂಬೇಡ್ಕರ್ ಬಾಲ್ಯದ ಕತೆ ಮುಗಿದಿದ್ದು, ಹೊಸದೊಂದು ಅಧ್ಯಾಯ ಶುರುವಾಗುತ್ತಿದೆ. ಇದಕ್ಕೆ ಮೊದಲು ಜೀ ಕನ್ನಡ ವಾಹಿನಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಅತಿಥಿಯಾಗಿ ಆಗಮಿಸಿದ್ದಾರೆ.

ಅಲ್ಲದೆ, ಮಹಾನಾಯಕನ ಜೀವನಗಾಥೆಯ ಧಾರವಾಹಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಹೊಸ ಪ್ರೋಮೋ ಬಿಡುಗಡೆ ಮಾಡಿ ಧಾರವಾಹಿಗೆ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್ ಗೆ ಹಾರಿದ ಕನ್ನಡತಿ ಹರಿಪ್ರಿಯಾ