Select Your Language

Notifications

webdunia
webdunia
webdunia
webdunia

ಟ್ರೋಲ್ ಆದ ಗಾಯಕ ರಾಜೇಶ್ ಕೃಷ್ಣನ್

ಟ್ರೋಲ್ ಆದ ಗಾಯಕ ರಾಜೇಶ್ ಕೃಷ್ಣನ್
ಬೆಂಗಳೂರು , ಭಾನುವಾರ, 15 ಆಗಸ್ಟ್ 2021 (09:14 IST)
ಬೆಂಗಳೂರು: ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಸ್ ಪಿ. ಬಾಲಸುಬ್ರಮಣ್ಯಂ ಸ್ಮರಣಾರ್ಥ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.

 

ಮೂವರು ತೀರ್ಪುಗಾರರಲ್ಲಿ ಒಬ್ಬರಾಗಿರುವ ರಾಜೇಶ್ ಕೃಷ್ಣನ್ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟ್ರೋಲ್ ಗೊಳಗಾಗಿದ್ದಾರೆ.

ಸ್ಪರ್ಧಿಯೊಬ್ಬರು ‘ನನ್ನೆದೆ ಕೋಗಿಲೆಯ’ ಹಾಡನ್ನು ಹಾಡುತ್ತಿದ್ದರೆ ರಾಜೇಶ್ ಕೃಷ್ಣನ್ ತೋರಿದ ಹಾವಭಾವ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಈ ಕಾರ್ಯಕ್ರಮಕ್ಕೆ ಅದರದ್ದೇ ಆದ ಘನತೆಯಿದೆ. ಅಲ್ಲದೆ ರಾಜೇಶ್ ಕೃಷ್ಣನ್ ಯಾವತ್ತೂ ಈ ರೀತಿ ಆಡಿಲ್ಲ. ಯಾಕೆ ಈ ಕಾರ್ಯಕ್ರಮದಲ್ಲಿ ಚೆಲ್ಲು ಚೆಲ್ಲಾಗಿ ಆಡಿ ಕಾರ್ಯಕ್ರಮದ ಘನತೆ ಹಾಳು ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಡಗೈಯೇ ಅಪಘಾತಕ್ಕೆ ಕಾರಣ ಅಂತಿದ್ದಾರೆ ದೂದ್ ಪೇಡ ದಿಗಂತ್