Select Your Language

Notifications

webdunia
webdunia
webdunia
webdunia

ಎಡಗೈಯೇ ಅಪಘಾತಕ್ಕೆ ಕಾರಣ ಅಂತಿದ್ದಾರೆ ದೂದ್ ಪೇಡ ದಿಗಂತ್

ಎಡಗೈಯೇ ಅಪಘಾತಕ್ಕೆ ಕಾರಣ ಅಂತಿದ್ದಾರೆ ದೂದ್ ಪೇಡ ದಿಗಂತ್
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (11:32 IST)
ಬೆಂಗಳೂರು: ನಟ ದಿಗಂತ್ ಇದೀಗ ವಿಶಿಷ್ಟ ಟೈಟಲ್ ನ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಎಂದು ಟೈಟಲ್ ಅನೌನ್ಸ್ ಆಗಿದೆ.


ವಿಶೇಷವೆಂದರೆ ಈ ಸಿನಿಮಾದಲ್ಲಿ ಎಡಚರ ಸಮಸ್ಯೆಗಳ ಬಗ್ಗೆ ಹೇಳಲಾಗಿದೆಯಂತೆ. ಎಡಕೈ ಬಳಸುವುದು ಕೆಲವರು ಶುಭ ಎಂದು ನಂಬಿದರೆ ಮತ್ತೆ ಕೆಲವರು ಅಶುಭ ಎನ್ನುತ್ತಾರೆ. ಅಂತೂ ಈ ಎಡಕೈಯಿಂದಾಗುವ ಅನಾಹುತಗಳ ಬಗ್ಗೆ ಹೇಳುವ ಕತೆಯೇ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ.

ಸಮರ್ಥ್ ಕಡ್ಕೋಲ್ ಈ ಸಿನಿಮಾದ ಸೂತ್ರಧಾರ. ಇದೊಂದು ಥ್ರಿಲ್ಲರ್ ಮತ್ತು ಪಕ್ಕಾ ಕಾಮಿಡಿ ಸಿನಿಮಾವಾಗಲಿದೆಯಂತೆ. ದಿಗಂತ್ ಪಾಲಿಗೆ ಇದೊಂದು ವಿಶಿಷ್ಟ ಪಾತ್ರವಾಗಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿದ ಡಾರ್ಲಿಂಗ್ ಕೃಷ್ಣ